Select Your Language

Notifications

webdunia
webdunia
webdunia
webdunia

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ಆರ್ ಸಿಬಿ ಪಂದ್ಯ: ಈ ಆಟಗಾರನಿಗೆ ಕೊಕ್ ಪಕ್ಕಾ

Rohit Sharma-Virat kohli
ಮುಂಬೈ: ಐಪಿಎಲ್ 2026 ರಲ್ಲಿ ಇಂದು ಬಹುನಿರೀಕ್ಷಿತ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆರ್ ಸಿಬಿಯಲ್ಲಿ ಈ ಆಟಗಾರನಿಗೆ ಕೊಕ್ ಕೊಡುವುದು ಖಚಿತವಾಗಿದೆ.

ಕಳೆದ ಮೂರು ಪಂದ್ಯಗಳಿಂದ ಆರ್ ಸಿಬಿ ಎರಡು ತವರಿನ ಪಂದ್ಯಗಳನ್ನು ಗೆದ್ದುಕೊಂಡಿದ್ದರೆ ನಂತರ ಗುವಾಹಟಿಯಲ್ಲಿ ನಡೆದ ಪಂದ್ಯವನ್ನು ಸೋತಿತ್ತು. ಕಳೆದ ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್ ಹುಳುಕುಗಳು ಬಯಲಿಗೆ ಬಂದಿತ್ತು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆಯಾಗುವುದು ಖಚಿತವಾಗಿದೆ.

ಇದುವರೆಗೆ ಮೂರು ಪಂದ್ಯಗಳನ್ನು ಆಡಿರುವ ಅಭಿನಂದನ್ ಸಿಂಗ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಕಳೆದ ಪಂದ್ಯದಲ್ಲಂತೂ 3 ಓವರ್ ಗಳಲ್ಲಿ 50 ಪ್ಲಸ್ ರನ್ ಚಚ್ಚಿಸಿಕೊಂಡಿದ್ದರು. ಅವರನ್ನು ಈ ಪಂದ್ಯದಿಂದ ಹೊರಗಿಡುವುದು ಬಹುತೇಕ ಖಚಿತವಾಗಿದೆ.

ಇತ್ತ ಮುಂಬೈ ಇಂಡಿಯನ್ಸ್ ಕೂಡಾ ಘಟಾನುಘಟಿಗಳನ್ನು ಹೊಂದಿದ್ದರೂ ಸತತವಾಗಿ ಎರಡು ಪಂದ್ಯಗಳನ್ನು ಸೋತಿದೆ. ಮುಂಬೈಗೆ ಯಾಕೋ ಬ್ಯಾಟಿಂಗ್ ಕೈ ಹಿಡಿದಿಲ್ಲ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮರಿಂದ ನಿರೀಕ್ಷಿತ ಪ್ರದರ್ಶ ಬರಬೇಕಿದೆ. ಆರ್ ಸಿಬಿ ಬೌಲಿಂಗ್ ವಿಭಾಗದ ದೌರ್ಬಲ್ಯವನ್ನು ಮುಂಬೈ ತನ್ನ ಲಾಭಕ್ಕೆ ಬಳಸಿಕೊಳ್ಳಬಹುದು. ಏನೇ ಆಗಿದ್ದರೂ ಇದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಕದನ ಎಂಬ ಕಾರಣಕ್ಕೆ ಜನರಲ್ಲಿ ಪಂದ್ಯ ನೋಡುವ ಉತ್ಸಾಹವಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಶುಭ್ಮನ್ ಗಿಲ್ ಪ್ರೀತಿ ವದಂತಿ ಬಗ್ಗೆ ಪರೋಕ್ಷವಾಗಿ ಕೇಳಿದ್ದಕ್ಕೆ ಸಾರಾ ತೆಂಡೂಲ್ಕರ್ ಈ ರೀತಿ ನಾಚಿಕೊಳ್ಳವುದಾ, Video