Publish Date: Thu, 09 Apr 2026 (16:31 IST)
Updated Date: Thu, 09 Apr 2026 (16:35 IST)
ಇಸ್ಲಾಮಾಬಾದ್: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟಿಗ ಬಾಬರ್ ಅಜಮ್ ಪತ್ರಿಕಾಗೋಷ್ಠಿಯಲ್ಲೇ ಸಿಟ್ಟಿಗೆದ್ದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ಪಿಎಸ್ಎಲ್ ಕ್ರಿಕೆಟ್ ಪಂದ್ಯಾವಳಿ ನಡುವೆ ಪತ್ರಿಕಾಗೋಷ್ಠಿಯೊಂದರಲ್ಲಿ ಬಾಬರ್ ಅಜಮ್ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರೊಬ್ಬರು ವಿರಾಟ್ ಕೊಹ್ಲಿ ಕೂಡಾ ನಿಮ್ಮ ಹಾಗೇ ಶಾಟ್ ಗಳನ್ನು ಹೊಡೆಯುತ್ತಾರೆ. ಆದರೆ ಅವರು ಪಂದ್ಯಗಳನ್ನು ಮುಗಿಸುತ್ತಾರೆ, ಆದರೆ ನಿಮಗೆ ಅದು ಸಾಧ್ಯವಾಗುತ್ತಿಲ್ಲ. ಜನ ನಿಮ್ಮನ್ನು ಅವರಿಗೆ ಹೋಲಿಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳುತ್ತಾರೆ.
ಈ ಪ್ರಶ್ನೆ ಕೇಳುತ್ತಿದ್ದಂತೇ ಬಾಬರ್ ಅಜಮ್ ಮುಖಚಹರೆಯೇ ಬದಲಾಗುತ್ತದೆ. ಈ ವಿಚಾರ ಇಲ್ಲಿ ಬೇಕಾಗಿಲ್ಲ. ಮೊದಲು ಹೋಲಿಕೆ ಮಾಡುವುದನ್ನು ಬಿಡಿ. ನಾನು ಪಂದ್ಯ ಮುಗಿಸುತ್ತಿಲ್ಲ ಎನ್ನುವುದು ನಿಮ್ಮ ತಪ್ಪು ಕಲ್ಪನೆ ಎಂದಿದ್ದಾರೆ.
ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಯಾವತ್ತೂ ಕೊಹ್ಲಿಗೆ ಬಾಬರ್ ಹೋಲಿಕೆ ಮಾಡಬೇಡಿ. ಕೊಹ್ಲಿಯ ಹತ್ತಿರವೂ ಅವರು ಸುಳಿಯಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.
Krishnaveni K
Publish Date: Thu, 09 Apr 2026 (16:31 IST)
Updated Date: Thu, 09 Apr 2026 (16:35 IST)