Publish Date: Thu, 09 Apr 2026 (10:46 IST)
Updated Date: Thu, 09 Apr 2026 (10:50 IST)
ದೆಹಲಿ: ಐಪಿಎಲ್ 2026 ರಲ್ಲಿ ದೆಹಲಿ ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ಮಗಳಿಗಾಗಿ ಮೈದಾನದಲ್ಲಿ ವಿಶಿಷ್ಟ ಸೆಲೆಬ್ರೇಷನ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಆರಂಭಿಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 210 ರನ್ ಗಳಿಸಿತ್ತು. ಈ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ಉತ್ತಮ ಆರಂಭ ಪಡೆದಿತ್ತು.
ಕೆಎಲ್ ರಾಹುಲ್ 52 ಎಸೆತಗಳಲ್ಲಿ 4 ಸಿಕ್ಸರ್, 11 ಬೌಂಡರಿ ಸಹಿತ 92 ರನ್ ಗಳಿಸಿದ್ದರು. ಅರ್ಧಶತಕ ಗಳಿಸುತ್ತಿದ್ದಂತೇ ರಾಹುಲ್ ಗ್ಯಾಲರಿಯಲ್ಲಿ ಕೂತಿದ್ದ ಪತ್ನಿ ಅಥಿಯಾ ಕಡೆಗೆ ನೋಡಿ ಕೈ ಬೆರಳು ಮಡಚಿ ಬಾಯಿಗಿಟ್ಟುಕೊಂಡು ಸೆಲೆಬ್ರೇಷನ್ ಮಾಡಿದ್ದಾರೆ.
ರಾಹುಲ್ ಈ ಹಿಂದೊಮ್ಮೆ ಸಂದರ್ಶನದಲ್ಲಿ ಇದು ತಮ್ಮ ಮಗಳಿಗಾಗಿ ಈ ರೀತಿ ಸೆಲೆಬ್ರೇಷನ್ ಮಾಡುವುದಾಗಿ ಹೇಳಿದ್ದರು. ಮಗಳು ಇದೇ ರೀತಿ ಬೆರಳು ಬಾಯಿಗಿಡುತ್ತಾಳೆ. ಅದನ್ನು ಸೂಚಿಸಲು ಈ ರೀತಿ ಸೆಲೆಬ್ರೇಷನ್ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಮಗಳಿಗಾಗಿ ಇಂಥಾ ಸೆಲೆಬ್ರೇಷನ್ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.