Daily Horoscope

Select Your Language

Notifications

webdunia
webdunia
webdunia
webdunia

ತಮ್ಮ ಔಟಾಗಿದ್ದಕ್ಕೆ ಹಾರಾಡಿದ ಅಣ್ಣ ಕೃನಾಲ್ ಪಾಂಡ್ಯ: ದುರುಗುಟ್ಟಿದ ಹಾರ್ದಿಕ್ ಪಾಂಡ್ಯ video

Hardik Pandya-Krunal Pandya
Photo Credit: X
ಮುಂಬೈ: ಕ್ರಿಕೆಟ್ ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವರದಿಗಳ ನಡುವೆಯೇ ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್ ಔಟಾದಾಗ ಕೃನಾಲ್ ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ.

ಹಾರ್ದಿಕ್ ಪಾಂಡ್ಯ ವಿಚ್ಛೇದನವಾಗಿ ಹೊಸ ಗೆಳತಿ ಬಂದ ಮೇಲೆ ಕೃನಾಲ್ ಮತ್ತು ಹಾರ್ದಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ತಕ್ಕಂತೆ ಹಾರ್ದಿಕ್ ಮಾಜಿ ಪತ್ನಿ ನತಾಶಾ ಜೊತೆ ಈಗಲೂ ಕೃನಾಲ್ ದಂಪತಿ ಸಂಪರ್ಕದಲ್ಲಿದ್ದಾರೆ.

ಈ ಗಾಸಿಪ್ ಗಳು ಹೊರಬಿದ್ದ ಬಳಿಕ ನಿನ್ನೆ ಇದೇ ಮೊದಲ ಬಾರಿಗೆ ಕೃನಾಲ್ ಮತ್ತು ಹಾರ್ದಿಕ್ ಪಂದ್ಯವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಹೀಗಾಗಿ ಎಲ್ಲರ ಗಮನ ಇವರ ಮೇಲಿತ್ತು. ತಮ್ಮನಿಗೆ ಬಾಲ್ ಎಸೆಯುವಾಗ ಮೊದಲು ಕೃನಾಲ್ ಕೊಂಚ ಭಾವುಕರಾದರು. ಒಂದು ಬಾಲ್ ಡೆಡ್ ಬಾಲ್ ಆಗಿತ್ತು. ಇನ್ನೊಂದು ಬಾಲ್ ಬೌನ್ಸರ್ ಎಸೆದಿದ್ದರು. ಈ ನಡುವೆ ಅಣ್ಣ-ತಮ್ಮ ಪರಸ್ಪರ ನಗುತ್ತಾ ಏನನ್ನೋ ಮಾತನಾಡಿಕೊಂಡಿದ್ದರು.

ಹೀಗಿದ್ದರೂ ಹಾರ್ದಿಕ್ ಔಟಾದಾಗ ಕ್ಯಾಚ್ ಪಡೆದವರಿಗಿಂತ, ವಿಕೆಟ್ ಪಡೆದವರಿಗಿಂತ ಕೃನಾಲ್ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಇದನ್ನು ದಿಟ್ಟಿಸಿ ನೋಡುತ್ತಾ ಹಾರ್ದಿಕ್ ಪೆವಿಲಿಯನ್ ಗೆ ತೆರಳಿದ್ದಾರೆ. ಹೀಗಾಗಿ ಅಣ್ಣ-ತಮ್ಮ ನಡುವೆ ಒಳಗೊಳಗೇ ಏನೋ ನಡೆಯುತ್ತಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುವಂತಾಗಿದೆ.


pic.twitter.com/rvgm4mDsOV

 

— Sanju (@SanjuKu79832010) April 13, 2026

Share this Story:

Follow Webdunia kannada

ಮುಂದಿನ ಸುದ್ದಿ

ದಿಡೀರ್ ಬಾಲ್ ಬದಲಾಯಿಸಿದ ಅಂಪಾಯರ್, ಟಿಮ್ ಡೇವಿಡ್ ಮಾಡಿದ್ದಕ್ಕೆ ಅಂಪಾಯರ್ ಅಳುವುದೊಂದೇ ಬಾಕಿ Video