Select Your Language

Notifications

webdunia
webdunia
webdunia
webdunia

Video: ಪುತ್ರ ಅರ್ಜುನ್ ತೆಂಡುಲ್ಕರ್ ಸೊಸೆಗೆ ಹಾರ ಹಾಕುವಾಗ ಭಾವುಕರಾಗಿ ನಿಂತ ಸಚಿನ್ ತೆಂಡುಲ್ಕರ್

Sachin Tendulkar son wedding
Photo Credit: X
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇಂದು ಗೆಳತಿ ಸಾನಿಯಾ ಚಂದೋಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುತ್ರ ಅರ್ಜುನ್ ಸೊಸೆ ಸಾನಿಯಾಗೆ ಹಾರ ಹಾಕುವಾಗ ಸಚಿನ್ ಭಾವುಕರಾಗಿ ನಿಂತು ನೋಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಮಗನ ಮದುವೆ ಎನ್ನುವುದು ಎಷ್ಟೇ ದೊಡ್ಡ ಸೆಲೆಬ್ರಿಟಿಗಳಿಗಾದರೂ ಭಾವುಕ ಕ್ಷಣವೇ. ಸಚಿನ್ ಕೂಡಾ ಇದಕ್ಕೆ ಹೊರತಲ್ಲ. ಇಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಸಚಿನ್ ಪುತ್ರ , ಕ್ರಿಕೆಟಿಗ ಅರ್ಜುನ್ ತೆಂಡುಲ್ಕರ್ ಮತ್ತು ಸಾನಿಯಾ ಚಂದೋಕ್ ವಿವಾಹವಾಗಿದ್ದಾರೆ.

ಪುತ್ರ ಅರ್ಜುನ್ ಸೊಸೆಗೆ ಹಾರ ಹಾಕುವಾಗ ಪಕ್ಕದಲ್ಲೇ ನಿಂತಿದ್ದ ಸಚಿನ್ ಅಕ್ಷತೆ ಹಾಕುತ್ತಾ ಭಾವುಕರಾಗಿ ನಿಂತಿದ್ದರು. ಇನ್ನು ಈ ಮದುವೆಗೆ ಗಣ್ಯಾತಿಗಣ್ಯರು ಆಗಮಿಸಿದ್ದರು. ಕ್ರಿಕೆಟ್ ಲೋಕದಿಂದ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ಗೌತಮ್ ಗಂಭೀರ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಶ್ರೇಯಸ್ ಅಯ್ಯರ್, ಯೂಸುಫ್ ಪಠಾಣ್, ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಉದ್ಯಮಿ ಮುಕೇಶ್ ಅಂಬಾನಿ ಕುಟುಂಬಸ್ಥರು ಮದುವೆಗೆ ಕುಟುಂಬ ಸಮೇತ ಬಂದಿದ್ದಾರೆ.

pic.twitter.com/Ttt789kKLJ

 

— Thepublicspeaker1 (@ShubhamSin55766) March 5, 2026

Share this Story:

Follow Webdunia kannada

ಮುಂದಿನ ಸುದ್ದಿ

T20 WC: ವಾಂಖೆಡೆ ಮೈದಾನದ ಟೀಂ ಇಂಡಿಯಾ ಫ್ಯಾನ್ಸ್ ಬಾಯಿ ಬಂದ್ ಮಾಡ್ತೀವಿ: ಇಂಗ್ಲೆಂಡ್ ಬೌಲರ್ ಸವಾಲು