Select Your Language

Notifications

webdunia
webdunia
webdunia
webdunia

Video: ಕನಸಿನ ಡೆಬ್ಯೂಟ್ ಪಡೆದ ಮಾನವ್ ಸುತಾರ್: ಇದೊಂದು ಬಾಲ್ ಅಂತೂ ಅದ್ಭುತ ಎಂದ ಫ್ಯಾನ್ಸ್

Manav suthar
Photo Credit: X
ಚಂಢೀಘಡ: ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಐದು ವಿಕೆಟ್ ಗಳ ಗೊಂಚಲು ಪಡೆಯುವುದು ಯಾವುದೇ ಬೌಲರ್ ನ ಕನಸಾಗಿರುತ್ತದೆ. ಅದೇ ಕನಸು ನನಸಾದ ಖುಷಿಯಲ್ಲಿ ಟೀಂ ಇಂಡಿಯಾ ಯುವ ಬೌಲರ್ ಮಾನವ್ ಸುತಾರ್ ಇದ್ದಾರೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾದ ಮೊದಲ ಇನಿಂಗ್ಸ್ ನಲ್ಲಿ ಮಾನವ್ 6 ವಿಕೆಟ್ ಕಬಳಿಸಿ ಕನಸಿನ ಡೆಬ್ಯೂಟ್ ಪಡೆದಿದ್ದಾರೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 564 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಈ ಬೃಹತ್ ಮೊತ್ತ ಬೆನ್ನತ್ತಿ ಅಫ್ಘಾನಿಸ್ತಾನ ಮೊದಲ ಇನಿಂಗ್ಸ್ ನಲ್ಲಿ ಕೇವಲ 152 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಅನುಭವಿಸಿದೆ. ಅಫ್ಘಾನಿಸ್ತಾನಕ್ಕೆ ಕಾಡಿದ್ದು ಪದಾರ್ಪಣೆ ಮಾಡಿದ ಬೌಲರ್ ಮಾನವ್ ಸುತಾರ್.

ಒಟ್ಟು 22 ಓವರ್ ಎಸೆದ ಮಾನವ್ 33 ರನ್ ನೀಡಿ 6 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಮಾನವ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಈಗ ಎರಡನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ ಅವರು ರಹಮತ್ ಅವರ ವಿಕೆಟ್ ನ್ನು ಬೌಲ್ಡ್ ಮಾಡುವುದರ ಮೂಲಕ ಪಡೆದಿದ್ದಾರೆ. ಆ ಬಾಲ್ ಅಂತೂ ಅದ್ಭುತವಾಗಿತ್ತು. ಆ ವಿಡಿಯೋ ಇಲ್ಲಿದೆ ನೋಡಿ.


pic.twitter.com/aXsX9p1dCl

 

— Mufaddal Vohra (@mufaddal_vohra) June 7, 2026

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೂ ಟಿ20ಗೆ ರಜತ್‌ಗಿಲ್ಲ ಎಂಟ್ರಿ, ಕೈಬಿಟ್ಟಿದ್ದಕ್ಕೆ ಅಜಿತ್ ಅಗರ್ಕರ್ ಕಾರಣ ಕೊಟ್ಟಿದ್ದು ಹೀಗೇ