Daily Horoscope

Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್

Virat Kohli
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಒಂದು ಶಾಕಿಂಗ್ ಸುದ್ದಿ ಸಿಕ್ಕಿದೆ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಆಡುತ್ತಿಲ್ಲ.

ಐಪಿಎಲ್ 2026 ರಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಕೊನೆಯ ಪಂದ್ಯದ ವೇಳೆಗೆ ಕಾಲು ನೋವು ಅನುಭವಿಸಿದ್ದರು. ಕುಂಟುತ್ತಲೇ ಹೇಗೋ ಐಪಿಎಲ್ 2026 ಫೈನಲ್ ನಲ್ಲಿ ಬ್ಯಾಟಿಂಗ್ ಮಾಡಿದ್ದಲ್ಲದೆ ತಂಡಕ್ಕೆ ಗೆಲುವನ್ನೂ ಕೊಡಿಸಿದ್ದರು.

ಅಫ್ಘಾನಿಸ್ತಾನದಿಂದ ಜೂನ್ 6 ರಿಂದ 10 ರವರೆಗೆ ಟೆಸ್ಟ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಜೂನ್ 13 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಈಗಾಗಲೇ ಈ ಸರಣಿಗೆ ತಂಡದ ಆಯ್ಕೆ ನಡೆದಿತ್ತು. ವಿರಾಟ್ ಕೊಹ್ಲಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಈಗ ಗಾಯದ ಕಾರಣದಿಂದ ಕೊಹ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ತವರಿನಲ್ಲಿ ಮತ್ತೆ ಕೊಹ್ಲಿ ಆಡುವುದನ್ನು ನೋಡಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ತಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯಕುಮಾರ್ ಗೆ ಕೊಕ್: ಐರ್ಲೆಂಡ್ ಸರಣಿಗೆ ಟೀಂ ಇಂಡಿಯಾ ಟಿ20 ತಂಡಕ್ಕೆ ಹೊಸ ನಾಯಕ, ಈ ಮೂವರಲ್ಲಿ ಯಾರಿಗೆ ಚಾನ್ಸ್