Publish Date: Sun, 31 May 2026 (23:28 IST)
Updated Date: Sun, 31 May 2026 (23:33 IST)
ಅಹ್ಮದಾಬಾದ್: ಐಪಿಎಲ್ 2026 ಫೈನಲ್ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಯಿತು.
ಗುಜರಾತ್ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಿ ಆರ್ ಸಿಬಿ ಈ ಸಲಾನೂ ಕಪ್ ನಮ್ದೇ ಎಂದು ಸಾರಿತು. ಇಂದು ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.
156 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಆರ್ ಸಿಬಿ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರ್ ಸಿಬಿಗೆ ಸ್ಪೋಟಕ ಆರಂಭ ನೀಡಿದ್ದು ವೆಂಕಟೇಶ್ ಅಯ್ಯರ್. 16 ಎಸೆತ ಎದುರಿಸಿದ ಅವರು 32 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಆರ್ ಸಿಬಿ ಇನಿಂಗ್ಸ್ ನ ಮುನ್ನಡೆಸಿದ್ದು ಒನ್ ಆಂಡ್ ಓನ್ಲೀ ಕಿಂಗ್ ಕೊಹ್ಲಿ. ಕಾಲು ನೋವಿನ ನಡುವೆಯೂ ದೃಢವಾಗಿ ನಿಂತ ಕೊಹ್ಲಿ ಎರಡನೇ ಬಾರಿಗೆ ಕಪ್ ನಮ್ಮದಾಗಿಸಲು ಸರ್ವ ಪ್ರಯತ್ನವನ್ನೂ ನಡೆಸಿದರು. ಒಟ್ಟು 42 ಎಸೆತ ಎದುರಿಸಿದ ಅವರು 75 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗುಳಿದರು.
ಕಳೆದ ಬಾರಿ ಮೊದಲ ಬಾರಿ ಕಪ್ ಗೆದ್ದ ಸಂಭ್ರಮವಾಗಿದ್ದರೆ ಈ ಬಾರಿ ಮತ್ತೊಮ್ಮೆ ಕಪ್ ಗೆದ್ದ ಸಂಭ್ರಮ ಆರ್ ಸಿಬಿ ತಂಡ ಮತ್ತು ಅಭಿಮಾನಿಗಳದ್ದಾಗಿದೆ. 2025 ರಲ್ಲಿ ಮೊದಲ ಚಾಂಪಿಯನ್ ಆಗಿದ್ದ ಆರ್ ಸಿಬಿ ಈಗ ಸತತ ಎರಡನೇ ಬಾರಿಗೆ 2026 ರಲ್ಲಿ ಕಪ್ ಗೆದ್ದುಕೊಂಡಿದೆ. ಮಹಿಳಾ ಆರ್ ಸಿಬಿ ತಂಡದ ಬಳಿಕ ಈಗ ಪುರುಷರ ತಂಡವೂ ಎರಡನೇ ಬಾರಿ ಕಪ್ ಗೆದ್ದು ಸಾಧನೆ ಮಾಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ