Publish Date: Sun, 31 May 2026 (20:30 IST)
Updated Date: Sun, 31 May 2026 (20:33 IST)
ಅಹ್ಮದಾಬಾದ್: ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತೆ ಎನ್ನಲು ವಿರಾಟ್ ಕೊಹ್ಲಿ ನೀಡಿದ ಈ ಒಂದು ಸನ್ನೆ ಸಾಕು.
ಇಂದು ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅಲ್ಲಿಗೇ ಆರ್ ಸಿಬಿ ಪಾಳಯದಲ್ಲಿ ಉತ್ಸಾಹ ಹೆಚ್ಚಾಗಿತ್ತು. ಯಾಕೆಂದರೆ ಅಹ್ಮದಾಬಾದ್ ಮೈದಾನದಲ್ಲಿ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಮಾಡಿದರೇ ಗೆಲ್ಲುವ ಅವಕಾಶ ಹೆಚ್ಚು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ರನ್ ಗಳಿಸುವುದು ಅಷಷ್ಟು ಸುಲಭವಲ್ಲ.
ಗುಜರಾತ್ ತಂಡದ ಪ್ರಮುಖ ಬ್ಯಾಟಿಗ ಎಂದರೆ ನಾಯಕ ಶುಭಮನ್ ಗಿಲ್. ಅವರನ್ನು ಬೇಗನೇ ಕಟ್ಟಿ ಹಾಕುವುದು ಆರ್ ಸಿಬಿ ಗುರಿಯಾಗಿತ್ತು. ಅದರಂತೇ ಗಿಲ್ ಇಂದು 10 ರನ್ ಗಳಿಸಿದ್ದಾಗ ಜೋಶ್ ಹೇಝಲ್ ವುಡ್ ಎಸೆತದಲ್ಲಿ ರಜತ್ ಪಾಟೀದಾರ್ ಗೆ ಕ್ಯಾಚಿತ್ತು ಪೆವಿಲಿಯನ್ ಗೆ ನಿರ್ಗಮಿಸಿದರು.
ಗಿಲ್ ಔಟಾಗುತ್ತಿದ್ದಂತೇ ವಿರಾಟ್ ಕೊಹ್ಲಿ ಅಗ್ರೆಸಿವ್ ಆಗಿ ಪಂದ್ಯ ಗೆದ್ದಂತೆ ಸೆಲೆಬ್ರೇಷನ್ ಮಾಡಿದ್ದಾರೆ. ಅವರ ಜೊತೆಗೆ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಶರ್ಮಾ ಕೂಡಾ ಅಷ್ಟೇ ಸಂಭ್ರಮಪಟ್ಟಿದ್ದಾರೆ. ಕೊಹ್ಲಿಯ ಈ ಒಂದು ಸನ್ನೆಯೇ ಈ ಸಲ ಕಪ್ ನಮ್ದೇ ಎಂದು ಆರ್ ಸಿಬಿ ಅಭಿಮಾನಿಗಳಿಗೆ ಸಂದೇಶ ಕೊಟ್ಟಂತಿತ್ತು. ಗಿಲ್ ವಿಕೆಟ್ ಬೇಗನೇ ಪಡೆದಿದ್ದರಿಂದ ಆರ್ ಸಿಬಿಗೆ ಎದುರಾಳಿ ಮೇಲೆ ಒತ್ತಡ ಹೇರುವುದು ಸುಲಭವಾಗಿತ್ತು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ