Daily Horoscope

Select Your Language

Notifications

webdunia
webdunia
webdunia
webdunia

ಸದನ ಇರೋದು ಐಪಿಎಲ್ ಟಿಕೆಟ್ ಚರ್ಚೆಗಾ: ಕರ್ನಾಟಕದ ಶಾಸಕರಿಗೆ ಎಲ್ಲೆಡೆಯಿಂದ ತಪರಾಕಿ Video

MLA Kashappanavar
Photo Credit: X
ಬೆಂಗಳೂರು: ಸದನ ಇರೋದು ಜನರ ಸಮಸ್ಯೆ ಚರ್ಚೆ ಮಾಡಲಾ, ಐಪಿಎಲ್ ಟಿಕೆಟ್ ಚರ್ಚೆಗಾ? ಕರ್ನಾಟಕದ ಶಾಸಕರಿಗೆ ಈಗ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನಾಳೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲೇ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಆಡಲಿದೆ. ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ. ಬೆಲೆಯೂ ದುಬಾರಿ. ಇದೀಗ ಶಾಸಕರಿಗೂ ಐಪಿಎಲ್ ಟಿಕೆಟ್ ಪಡೆಯುವ ಚಿಂತೆ.

ಹೀಗಾಗಿ ಸದನದಲ್ಲೇ ಈ ಬಗ್ಗೆ ಯಾವುದೋ ರಾಷ್ಟ್ರೀಯ ಸಮಸ್ಯೆ ಎನ್ನುವಂತೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಕಾಶಪ್ಪನವರ್ ವಿಜಯಾನಂದ ಎಂಎಲ್ಎಗಳಿಗೆ ತಲಾ 5 ಟಿಕೆಟ್ ಕೊಡಬೇಕು. ನಮಗೆ ಕ್ಯೂನಲ್ಲಿ ನಿಲ್ಲಕ್ಕಾಗಲ್ಲ ಎಂದು ಮಾಧ್ಯಮಗಳ ಮುಂದೆ ಮತ್ತು ಸದನದಲ್ಲಿ ಹೇಳಿಕೊಂಡಿದ್ದರು.

ಇನ್ನು ಬಿಜೆಪಿ ಶಾಸಕರೂ ಕಡಿಮೆಯೇನಲ್ಲ. ವಿಪಕ್ಷ ನಾಯಕ ಆರ್ ಅಶೋಕ್ ಅವರೇ ನಿನ್ನೆ ಸದನಲ್ಲಿ ಐಪಿಎಲ್ ಟಿಕೆಟ್ ಗಾಗಿ ಮೊರೆಯಿಟ್ಟಿದ್ದರು. ವಿಧಾನಸಭೆಯಲ್ಲಿ ಸ್ಪೀಕರ್ ಯುಟಿ ಖಾದರ್ ನಾನು ಈಗ ಟಿಕೆಟ್ ಕೊಡಿಸಲು ಆಗುತ್ತಾ? ನೀವೇ ಮಾತನಾಡಿ ಎಂದಿದ್ದರು.

ಆದರೆ ಮೇಲ್ಮನೆಯಲ್ಲಿ ಮಾತ್ರ ಸ್ಪೀಕರ್ ಬಸವರಾಜ ಹೊರಟ್ಟಿ ಶಾಸಕರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆರ್ ಸಿಬಿ ಮ್ಯಾಚ್ ಗೆ ಟಿಕೆಟ್ ಬೇಕಾದವರು ದುಡ್ಡು ಕೊಟ್ಟು ನೋಡಿ ಹೋಗಿ. ಬೇಡ ಅಂದವರು ಬಿಡಿ. ಇಲ್ಲಿ ಅದರ ಚರ್ಚೆ ಬೇಡ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದರು.

ಇನ್ನು, ಶಾಸಕರ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಒಬ್ಬೊಬ್ಬ ಶಾಸಕರೂ ಕೋಟಿ ಕೋಟಿ ಹಣವಂತರು. ಇವರಿಗೆ ಒಂದು 3-4 ಸಾವಿರ ರೂ ಕೊಟ್ಟು ಐಪಿಎಲ್ ಟಿಕೆಟ್ ಖರೀದಿ ಮಾಡಲು ಸಾಧ್ಯವಾಗಲ್ವ? ಅದಕ್ಕಾಗಿ ರಾಜ್ಯದ ಜನರ ಸಮಸ್ಯೆ ಚರ್ಚಿಸಬೇಕಾದ ಸದನದಲ್ಲಿ ಏನೋ ಗಹನ ಸಮಸ್ಯೆ ಎಂಬಂತೆ ಚರ್ಚೆ ಮಾಡಬೇಕಾ? ಇದಕ್ಕೇನಾ ಇವರನ್ನು ನಾವು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸೋದು ಎಂದು ಕಿಡಿ ಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

IPL 2026: 2016 ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು, ಈ ಬಾರಿ ಅದನ್ನು ಮುರಿಯುತ್ತಾರಾ