Select Your Language

Notifications

webdunia
webdunia
webdunia
webdunia

IPL 2026: 2016 ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು, ಈ ಬಾರಿ ಅದನ್ನು ಮುರಿಯುತ್ತಾರಾ

Virat Kohli
ಬೆಂಗಳೂರು: 2016 ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ ದಾಖಲೆಯ ರನ್ ಈ ಬಾರಿ ಮುರಿಯುತ್ತಾರಾ? ಆ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಕ್ರಿಕೆಟ್ ಪಂಡಿತರು.

ಐಪಿಎಲ್ 2026 ಕ್ಕೆ ನಾಳೆಯಿಂದ ಚಾಲನೆ ಸಿಗಲಿದೆ. ಬೆಂಗಳೂರಿನಲ್ಲಿ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹಾಲಿ ಚಾಂಪಿಯನ್ ಆರ್ ಸಿಬಿ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಈಗಾಗಲೇ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಈ ಬಾರಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಯಾಕೆಂದರೆ ಕಳೆದ ಬಾರಿಗೆ ಹೋಲಿಸಿದರೆ ಅವರು ಅದ್ಭುತ ಫಾರ್ಮ್ ನಲ್ಲಿದ್ದಾರೆ. ಅಭ್ಯಾಸದ ವೇಳೆಯೂ ದೊಡ್ಡ ಹೊಡೆತಗಳ ಮೂಲಕ ಭರವಸೆ ಮೂಡಿಸಿದ್ದಾರೆ.

2016 ರ ಐಪಿಎಲ್ ನಲ್ಲಿ ಕೊಹ್ಲಿ ಒಂದೇ ಆವೃತ್ತಿಯಲ್ಲಿ ದಾಖಲೆ 973 ರನ್ ಗಳಿಸಿದ್ದರು. ಈ ದಾಖಲೆಯನ್ನು ಅಳಿಸಲು ಅವರಿಗೆ ಈ ಬಾರಿ ಉತ್ತಮ ಅವಕಾಶವಿದೆ. 2024 ರಲ್ಲೂ ಅವರು ಎರಡನೇ ಬಾರಿಗೆ ಗರಿಷ್ಠ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಗಳಿಸಿದ್ದರು. ಇದೀಗ ಯಾವುದೇ ನಾಯಕತ್ವದ ಒತ್ತಡಗಳಿಲ್ಲದೇ ಆಡುತ್ತಿರುವ ಕೊಹ್ಲಿ ಕಳೆದ ಎರಡು ಬಾರಿ ಮಾಡಿದ್ದ ರನ್ ದಾಖಲೆಯನ್ನು ಅಳಿಸಬಹುದು ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ಒಂದು ವೇಳೆ ಅವರು ಅದರಲ್ಲಿ ಯಶಸ್ವಿಯಾದರೆ ಅಭಿಮಾನಿಗಳಿಗಂತೂ ಈ ಐಪಿಎಲ್ ಹಬ್ಬವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್‌2026ರ ಎರಡನೇ ಹಂತದ ವೇಳಾಪಟ್ಟಿ ಬಿಡುಗಡೆ