Webdunia - Bharat's app for daily news and videos

Install App

ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಪಡೆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾರಾ ಕಿರಿಯರು?

Krishnaveni K
ಶುಕ್ರವಾರ, 9 ಫೆಬ್ರವರಿ 2024 (11:14 IST)
ಬೆನೊನಿ: ಕಳೆದ ವರ್ಷ ನವಂಬರ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಫೈನಲ್ ಅನುಭವಿಸಿದ ಸೋಲು ಎಲ್ಲಾ ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ‍್ಯವೇ ಇಲ್ಲ.

ಅಂದು ಹಿರಿಯರು ಅನುಭವಿಸಿದ ಸೋಲಿಗೆ ಇಂದು ಭಾರತದ ಕಿರಿಯರಿಗೆ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಅಂಡರ್ 19 ವಿಶ್ವಕಪ್ ಫೈನಲ್‍ ನಲ್ಲಿ ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ.

ಸೆಮಿಫೈನಲ್‍ ನಲ್ಲಿ ಭಾರತ ಅತಿಥೇಯ ದ.ಆಫ್ರಿಕಾವನ್ನು ಸೋಲಿಸಿ ಫೈನಲ್ ಗೇರಿತ್ತು. ಎರಡನೇ ಸೆಮಿಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ ಗೇರಿದೆ. ಈ ಮೂಲಕ ಭಾರತ-ಆಸ್ಟ್ರೇಲಿಯಾ ಫೈನಲ್ ಗೆ ವೇದಿಕೆ ಸಿದ್ಧವಾಗಿದೆ.

ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದೀಗ ಕಿರಿಯರಿಗೆ ಉತ್ತಮ ವೇದಿಕೆ ಸಿಕ್ಕಂತಾಗಿದೆ. ಸಾಮಾನ್ಯವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯವೆಂದರೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ಉತ್ಸಾಹವಿರುತ್ತದೆ. ಆದರೆ ಈಗ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಎಂದರೂ ಅಷ್ಟೇ ಉತ್ಸಾಹವಿದೆ. ಉದಯ್ ಸುಹಾರಣ್ ನೇತೃತ್ವದ ಯುವ ಪಡೆ ಈ ಟೂರ್ನಿಯುದ್ದಕ್ಕೂ ಚೇತೋಹಾರಿ ಪ್ರದರ್ಶನ ನೀಡುತ್ತಾ ಬಂದಿದೆ. ಆರನೇ ಬಾರಿಗೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಹೀಗಾಗಿ ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಆಸೀಸ್ ಸೋಲಿಸಿದರೆ ಭಾರತೀಯರಿಗೂ ನೆಮ್ಮದಿಯಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿದ್ದರೂ ಹಾರ್ದಿಕ್ ಪಾಂಡ್ಯಗೆ ಹಿಂಬಡ್ತಿ

Asia Cup: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments