Select Your Language

Notifications

webdunia
webdunia
webdunia
webdunia

ಭಾರತ-ಪಾಕ್ ಮ್ಯಾಚ್ ಬ್ಯಾನ್ ಮಾಡಿ! ಟ್ವಿಟರ್ ನಲ್ಲಿ ಶುರುವಾಯ್ತು ಟ್ರೆಂಡ್

ಭಾರತ-ಪಾಕ್ ಮ್ಯಾಚ್ ಬ್ಯಾನ್ ಮಾಡಿ! ಟ್ವಿಟರ್ ನಲ್ಲಿ ಶುರುವಾಯ್ತು ಟ್ರೆಂಡ್
ದುಬೈ , ಸೋಮವಾರ, 18 ಅಕ್ಟೋಬರ್ 2021 (09:31 IST)
ದುಬೈ: ಟಿ20 ವಿಶ್ವಕಪ್ ನ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮೊದಲು ಟ್ವಿಟರ್ ನಲ್ಲಿ ಅಭಿಮಾನಿಗಳ ವಾರ್ ಶುರುವಾಗಿದೆ.


ಭಾರತ ಕ್ರಿಕೆಟ್ ತಂಡದ ಕೆಲವು ಸಮರ್ಥಕರು ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ನಿಷೇಧಿಸಿ ಎಂದು ಆಗ್ರಹಿಸಿದರೆ, ಮತ್ತೆ ಕೆಲವರು ಅವರನ್ನು ಆಡಿ ಸೋಲಿಸಿ ಎಂದು ಕರೆ ನೀಡಿದ್ದಾರೆ.

ಪಾಕ್ ಪ್ರೇರಿತ ಉಗ್ರರಿಂದ ಹತರಾದ ಭಾರತೀಯ ಸೈನಿಕರ ಫೋಟೋ ಪ್ರಕಟಿಸಿ, ಭಾರತದಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕ್ ಜೊತೆ ಕ್ರಿಕೆಟ್ ಆಡಬಾರದು ಎಂದು ಕೆಲವರು ಒತ್ತಾಯಿಸಿದ್ದಾರೆ. ಪಾಕ್ ಅಭಿಮಾನಿಗಳೂ ಇದಕ್ಕೆ ತಿರುಗೇಟು ನೀಡಿದ್ದು, ಭಾರತಕ್ಕೆ ಸೋಲುವ ಭಯವಿರಬೇಕು, ಅದಕ್ಕೇ ಆಡಬೇಡಿ ಎನ್ನುತ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಭಾರತೀಯರೂ ತಕ್ಕ ತಿರುಗೇಟು ಕೊಟ್ಟಿದ್ದು, ಪಂದ್ಯ ಮುಗಿದ ಮೇಲೆ ಸ್ಕೋರ್ ಹೀಗಿರಬಹುದು ಎಂದು ಪಾಕ್ ಕಳಪೆ ಮೊತ್ತಕ್ಕೆ ಆಲೌಟ್ ಆದ ಫೋಟೋವೊಂದನ್ನು ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ಕೇಸ್ ನಲ್ಲಿ ಅರೆಸ್ಟ್ ಆದ ಕ್ರಿಕೆಟಿಗ ಯುವರಾಜ್ ಸಿಂಗ್