Publish Date: Mon, 18 Oct 2021 (09:11 IST)
Updated Date: Mon, 18 Oct 2021 (09:34 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿ ಒಂದೇ ಗಂಟೆಯಲ್ಲಿ ರಿಲೀಸ್ ಆದ ಘಟನೆ ನಡೆದಿದೆ.
2020 ರಲ್ಲಿ ಯುವರಾಜ್ ಸಿಂಗ್ ಇನ್ ಸ್ಟಾಗ್ರಾಂ ಲೈವ್ ಸೆಷನ್ ನಲ್ಲಿ ಯಜುವೇಂದ್ರ ಚಾಹಲ್ ರನ್ನು ಕಿಚಾಯಿಸುವಾಗ ಜಾತಿ ನಿಂದನೆ ಮಾಡಿದ್ದರು. ಇದರ ಬಗ್ಗೆ ಅಂದೇ ಯುವಿ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಈ ಕೇಸ್ ಈಗ ಯುವಿಗೆ ಕಂಟಕವಾಗಿದ್ದು, ನಿನ್ನೆ ಅವರನ್ನು ಹರ್ಯಾಣದ ಹನ್ಸಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಮೂರು ಗಂಟೆಗಳ ಕಾಲ ಯುವಿ ವಿಚಾರಣೆ ನಡೆಸಿದ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.