Publish Date: Sun, 17 Oct 2021 (19:04 IST)
Updated Date: Sun, 17 Oct 2021 (19:08 IST)
ದುಬೈ: ಐಸಿಸಿ ಟಿ20 ವಿಶ್ವಕಪ್ ಕೂಟ ಇಂದು ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಪಪವು ನ್ಯೂಗಿನಿಯಾ ವಿರುದ್ಧ ಒಮನ್ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಪುವಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಪಪುವಾ ಪರ ಅಸದ್ ವಾಲಾ 56, ಚಾರ್ಲ್ಸ್ ಅಮಿನಿ 37 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಒಮನ್ 13.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 131 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಅಕೀಬ್ ಇಲ್ಯಾಸ್ ಅಜೇಯ 50, ಜತಿಂದರ್ ಸಿಂಗ್ ಅಜೇಯ 73 ರನ್ ಗಳಿಸಿದರು.