Publish Date: Sun, 21 Jul 2019 (08:52 IST)
Updated Date: Sun, 21 Jul 2019 (08:54 IST)
ಮುಂಬೈ: ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆ ಮಾಡಲು ಈಗಾಗಲೇ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಹೊಸ ಕೋಚ್ ಯಾರಾಗಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ.
ಕೆಲವು ಮೂಲಗಳ ಪ್ರಕಾರ ರವಿಶಾಸ್ತ್ರಿಯೇ ಮತ್ತೆ ಕೋಚ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿಯ ಬೆಂಬಲವಿರುವುದರಿಂದ ಬಿಸಿಸಿಐ ಮತ್ತೆ ರವಿಶಾಸ್ತ್ರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿತ್ತು.
ಆದರೆ ಈಗ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ನಾಯಕನ ಪಾತ್ರವಿರದು ಎಂಬ ಸ್ಪಷ್ಟನೆ ಬಂದ ಮೇಲೆ ಇನ್ನೊಬ್ಬರ ಹೆಸರು ಕೇಳಿಬರುತ್ತಿದೆ. ಅವರೇ ಟಾಮ್ ಮೂಡಿ. ಆಸ್ಟ್ರೇಲಿಯಾ ಮೂಲದ ಟಾಮ್ ಮೂಡಿ ಹೆಸರು ಈಗ ಮುಂಚೂಣಿಯಲ್ಲಿದೆ. ಮೂಡಿ ಈಗಾಗಲೇ ಐಪಿಎಲ್ ನ ಸನ್ ರೈಸರ್ಸ್ ಹೈದರಾಬಾದ್ ತಂಡ, ಶ್ರೀಲಂಕಾ ಕ್ರಿಕೆಟ್ ತಂಡ, ಬಾಂಗ್ಲಾದೇಶ ಪ್ರೀಮಿಯರ್ ಕ್ರಿಕೆಟ್ ಲೀಗ್ ನಲ್ಲಿ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಮೂಡಿ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ.