Publish Date: Fri, 19 Jul 2019 (09:36 IST)
Updated Date: Fri, 19 Jul 2019 (09:39 IST)
ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಇಂದು ನಡೆಯಬೇಕಿತ್ತು. ಆದರೆ ದಿಡೀರ್ ಆಗಿ ಬಿಸಿಸಿಐ ಇದನ್ನು ಮುಂದೂಡಿದೆ.
ಇದಕ್ಕೆ ಕಾರಣ ಧೋನಿ ಭವಿಷ್ಯ ಮತ್ತು ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ಇರುವ ಗೊಂದಲಗಳು ಎನ್ನಲಾಗಿದೆ. ಧೋನಿಗೆ ಕೊಕ್ ನೀಡಿ ರಿಷಬ್ ಪಂತ್ ಗೆ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಜವಾಬ್ಧಾರಿ ನೀಡುವ ಉದ್ದೇಶ ಬಿಸಿಸಿಐಗಿತ್ತು.
ಆದರೆ ಧೋನಿ ನಿವೃತ್ತಿ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅತ್ತ ಕೊಹ್ಲಿಗೂ ಈ ಸರಣಿಯಿಂದ ವಿಶ್ರಾಂತಿ ನೀಡಿ ರೋಹಿತ್ ಶರ್ಮಾಗೆ ನಾಯಕತ್ವ ನೀಡುವ ಬಗ್ಗೆಯೂ ಸೂಕ್ತ ನಿರ್ಧಾರಗಳಾಗಿಲ್ಲ. ಹೀಗಾಗಿ ಆಯ್ಕೆ ಪ್ರಕ್ರಿಯೆಯನ್ನೇ ಮುಂದೂಡಲಾಗಿದೆ ಎನ್ನಲಾಗಿದೆ.