Daily Horoscope
✕

ವಿಕೆಟ್ ಹಿಂದುಗಡೆ ನಿಂತೇ ರೋಹಿತ್ ಶರ್ಮಾ ಜತೆ ಮುಂಬೈ ಇಂಡಿಯನ್ಸ್ ಪರ ಬೆಟ್ಟಿಂಗ್ ಕಟ್ಟಿದ ಆಸೀಸ್ ನಾಯಕ!

Webdunia
ಶುಕ್ರವಾರ, 28 ಡಿಸೆಂಬರ್ 2018 (09:00 IST)
ಮೆಲ್ಬೋರ್ನ್:  ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರ ನಡುವೆ ಸಣ್ಣ ಮಟ್ಟಿಗೆ ಸ್ಲೆಡ್ಜಿಂಗ್ ಮುಂದುವರಿದಿದೆ.


ಮೊದಲ ಪಂದ್ಯದಲ್ಲಿ ವಿರಾಟ್-ಟಿಮ್ ಪೇಯ್ನ್ ಮಾತಿನ ಚಕಮಕಿ ಭಾರೀ ಸುದ್ದಿಯಾಗಿತ್ತು. ಈ ಪಂದ್ಯದಲ್ಲಿ ಇದುವರೆಗೆ ಭಾರತೀಯರು ಸುಮ್ಮನಿದ್ದರೂ ಆಸೀಸ್ ನಾಯಕ ಟಿಮ್ ಪೇಯ್ನ್, ರೋಹಿತ್ ಶರ್ಮಾರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ಜಿಗುಟು ಆಟವಾಡುತ್ತಿದ್ದ ರೋಹಿತ್ ಶರ್ಮಾರನ್ನು ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಟಿಮ್ ಪೇಯ್ನ್ ಮಾತಿನ ಮೂಲಕ ಕೆಣಕಿ ಗಮನ ಹಾಳು ಮಾಡಲು ಯತ್ನಿಸಿದರು. ಈ ವೇಳೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಅಜಿಂಕ್ಯಾ ರೆಹಾನೆ ಇದ್ದರು. ನಥನ್ ಲಿಯೊನ್ ಬೌಲಿಂಗ್ ಮಾಡುತ್ತಿದ್ದಾಗ ತಮ್ಮ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಏರಾನ್ ಫಿಂಚ್ ಗೆ ರೋಹಿತ್ ಶರ್ಮಾಗೆ ಕೇಳುವಂತೆ ‘ಐಪಿಎಲ್ ನಲ್ಲಿ ಮುಂಬೈ ಸಪೋರ್ಟ್ ಮಾಡಬೇಕೋ, ರಾಜಸ್ಥಾನ್ ಸಪೋರ್ಟ್ ಮಾಡಬೇಕೋ ಎಂದು ಗೊಂದಲವಿದೆ. ಈ ಬಾಲ್ ನಲ್ಲಿ ಸಿಕ್ಸರ್ ಬಾರಿಸಿದರೆ ನನ್ನ ಬೆಂಬಲ ಮುಂಬೈಗೆ’ ಎಂದು ಪೇಯ್ನ್ ಕೆಣಕಿದ್ದಾರೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರೋಹಿತ್ ತಮ್ಮ ಪಾಡಿಗೆ ತಾವು ಆಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ZIM: ಕ್ಯಾಪ್ಟನ್ ಆಗಿ ಸ್ಮೃತಿ ಮಂಧಾನಗೆ ಮೊದಲ ಸರಣಿ: ಭಾರತ, ಜಿಂಬಾಬ್ವೆ ಸರಣಿ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

IND vs WI : ಇಂದಿನ ಪಂದ್ಯದ ಪಿಚ್ ವರದಿ, ಲೈವ್ ಸ್ಟ್ರೀಮಿಂಗ್ ಮತ್ತು ಟೀಂ ಇಂಡಿಯಾ ಸಂಭಾವ್ಯ ಬದಲಾವಣೆಗಳು

ಬೌಲರ್‌ಗಳ ವೃತ್ತಿಜೀವನ ಅಪಾಯದಲ್ಲಿದೆ: ಸೀಮಿತ ಓವರ್‌ಗಳ ಪಿಚ್‌ಗಳ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ

ಮನೆಯಲ್ಲಿ ಟಿವಿ ನೋಡುತ್ತಲೇ ಲಾಸ್ಟ್ ಐದು ಓವರ್ ಬೌಲಿಂಗ್ ಪ್ಲ್ಯಾನ್ ಮಾಡಿದ ಸೂರ್ಯಕುಮಾರ್ ಯಾದವ್ Video

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

ಮುಂದಿನ ಸುದ್ದಿ
Show comments