ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದದಿಂದಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇಯ್ನ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಟಿಮ್ ಪೇಯ್ನ್ ಅಶ್ಲೀಲ ಸಂದೇಶವೊಂದನ್ನು ಮಹಿಳಾ ಸಿಬ್ಬಂದಿಗೆ ಕಳುಹಿಸಿದ್ದರು ಎಂದು ಆರೋಪವಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೆಲಿಯಾ ತನಿಖೆ ನಡೆಸಲು ಮುಂದಾಗಿದೆ.
ಇದರ ಬೆನ್ನಲ್ಲೇ ಸ್ವಯಂ ಪ್ರೇರಿತರಾಗಿ ಟಿಮ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾದಾಗ ಟಿಮ್ ಆಸ್ಟ್ರೇಲಿಯಾ ತಂಡದ ನಾಯಕರಾಗಿ ನೇಮಕವಾಗಿದ್ದರು.