ಮುಂಬೈ: ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರತೀ ಪಂದ್ಯವನ್ನೂ ಗೆಲ್ಲಲು ಪ್ರಯಾಸಪಡುತ್ತಿದೆ. ತಂಡದ ಮೊತ್ತ 300 ರ ಗಡಿ ದಾಟುವುದೇ ಪ್ರಯಾಸಕರವಾಗುತ್ತಿದೆ.
ಇದಕ್ಕೆ ಕಾರಣ ಟಾಪ್ 4 ಬ್ಯಾಟಿಗರ ವೈಫಲ್ಯ. ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಸೇರಿದಂತೆ ಕಳೆದ ಎರಡು ವರ್ಷಗಳಿಂದ ಟಾಪ್ 4 ಬ್ಯಾಟಿಗರ ಬ್ಯಾಟಿಂಗ್ ಸರಾಸರಿ ಕೇವಲ 32.8. ಇದು ಐಸಿಸಿ ಟಾಪ್ 7 ತಂಡಗಳ ಪೈಕಿ ಎರಡನೇ ಕಳಪೆ ನಿರ್ವಹಣೆ. ಪ್ರತೀ ಪಂದ್ಯದಲ್ಲೂ 100 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ವಿಶೇಷವೆಂದರೆ ಭಾರತಕ್ಕೆ ರನ್ ಗಳಿಸಿಕೊಡುತ್ತಿರುವುದು ಐದರ ನಂತರದ ಕ್ರಮಾಂಕದ ಆಲ್ ರೌಂಡರ್ ಗಳು ಮತ್ತು ಬೌಲರ್ ಗಳು. ಇದರಿಂದಾಗಿಯೇ ದೊಡ್ಡ ಪಂದ್ಯಗಳಲ್ಲಿ ಭಾರತ ಗೆಲ್ಲಲು ಕಷ್ಟಪಡುತ್ತಿದೆ.