ಕೊನೆಗೂ ಆಸ್ಟ್ರೇಲಿಯಾ ಮೇಲೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

Webdunia
ಮಂಗಳವಾರ, 29 ಡಿಸೆಂಬರ್ 2020 (09:49 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿ ಸಮಬಲಗೊಳಿಸಿದೆ.


ನಿನ್ನೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್‍ ನಲ್ಲಿ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ 2 ರನ್ ಗಳ ಮುನ್ನಡೆಯೊಂದಿಗೆ ದಿನದಾಟ ಕೊನೆಗೊಳಿಸಿತ್ತು. ಇಂದು ಭರ್ತಿ 200 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿತ್ತು. ಭಾರತಕ್ಕೆ ಮೊದಲ ಇನಿಂಗ್ಸ್ ನಲ್ಲಿ 131 ರನ್ ಗಳ ಮುನ್ನಡೆಯಿದ್ದರಿಂದ 69 ರನ್ ಗಳ ಸುಲಭ ಗೆಲುವಿನ ಗುರಿ ಸಿಕ್ಕಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಮತ್ತೆ ಮಯಾಂಕ್ ಅಗರ್ವಾಲ್ (5 ರನ್) ಕೈ ಕೊಟ್ಟರು. ಅವರ ಹಿಂದೆಯೇ ಚೇತೇಶ್ವರ ಪೂಜಾರ ಕೂಡಾ 3 ರನ್ ಗೆ ವಿಕೆಟ್ ಒಪ್ಪಿಸಿದಾಗ ಆತಂಕ ಎದುರಾಯಿತು. ಆದರೆ ಮತ್ತೆ ಉತ್ತಮ ಆಟವಾಡಿದ ಶಬ್ನಂ ಗಿಲ್ ಅಜೇಯ 35 ರನ್ ಗಳಿಸಿದರೆ ನಾಯಕ ಅಜಿಂಕ್ಯಾ ರೆಹಾನೆ 27 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಎರಡೂ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯಾ ರೆಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಂತಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದು ಕಠಿಣ ಎದುರಾಳಿ

ಐದು ವರ್ಷಗಳ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ: ರೋಹಿತ್‌ ಶರ್ಮಾಗೆ ಶಾಕ್‌

IND vs NZ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾಗೆ ಕಾಡುತ್ತಿದೆ ಈ ಬೌಲರ್ ನ ಕೊರತೆ

IND vs NZ: ಒತ್ತಡದಲ್ಲಿ ಆಡಿ ಶತಕ ಗಳಿಸಿದ ಕೆಎಲ್ ರಾಹುಲ್ ಗೆ ಬಹುಪರಾಕ್

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

ಮುಂದಿನ ಸುದ್ದಿ
Show comments