Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಸರಣಿಗೆ ಮುನ್ನ ಟೀಂ ಇಂಡಿಯಾ ಅಭ್ಯಾಸ ಪಂದ್ಯ

webdunia
ಶನಿವಾರ, 26 ಜೂನ್ 2021 (13:35 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಟೀಂ ಇಂಡಿಯಾ ಆಂತರಿಕ ಅಭ್ಯಾಸ ಪಂದ್ಯವನ್ನು ಆಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಅನುಮತಿ ನೀಡಿದೆ.


ಸರಣಿಗೆ ಮುನ್ನ ಯಾವುದಾದರೂ ಕೌಂಟಿ ತಂಡದೊಂದಿಗೆ ಅಭ್ಯಾಸ ಪಂದ್ಯವಾಡಲು ಟೀಂ ಇಂಡಿಯಾ ಆಸಕ್ತಿ ತೋರಿತ್ತು. ಆದರೆ ಕೌಂಟಿ ತಂಡಗಳೊಂದಿಗೆ ಪಂದ್ಯ ಆಯೋಜಿಸಲು ಪ್ರಸಕ್ತ ಪರಿಸ್ಥಿತಿಯಲ್ಲಿ ಸಾಧ‍್ಯವಿಲ್ಲ ಎಂದಿರುವ ಇಂಗ್ಲೆಂಡ್ ಮಂಡಳಿ ಇಂಟ್ರಾ ಸ್ಕ್ವಾಡ್ ಮ್ಯಾಚ್ ಆಡಲಿ ಎಂದಿದೆ.

ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮುನ್ನ ನಡೆದಂತೆ ಟೀಂ ಇಂಡಿಯಾವೇ ಎರಡು ಗುಂಪಾಗಿ ವಿಭಜಿಸಿ ಅಭ್ಯಾಸ ಪಂದ್ಯವಾಡಲಿದೆ. ಆದರೆ ಈ ಪಂದ್ಯಕ್ಕೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ನೀಡಲ್ಲ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕುಸ್ತಿಪಟು ಸುಶೀಲ್ ಕುಮಾರ್ ತಿಹಾರ್ ಜೈಲ್ ಗೆ ಶಿಫ್ಟ್