ಏಷ್ಯಾ ಕಪ್: ಹಾಂಗ್ ಕಾಂಗ್ ವಿರುದ್ಧ ಗೆದ್ದ ಟೀಂ ಇಂಡಿಯಾ ಈಗ ಎ1

Webdunia
ಗುರುವಾರ, 1 ಸೆಪ್ಟಂಬರ್ 2022 (08:00 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಾಂಗ್ ಕಾಂಗ್ ವಿರುದ್ಧ 40 ರನ್ ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ ಎ1 ತಂಡವಾಗಿ ಸೂಪರ್ ಫೋರ್ ಹಂತಕ್ಕೇರಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್‍ ಕೊಹ್ಲಿ-ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 68 ರನ್ ಚಚ್ಚಿದರು. ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನಲ್ಲಿ 6 ಸಿಕ್ಸರ್, 6 ಬೌಂಡರಿ ಸೇರಿದೆ. ಕೊಹ್ಲಿ 44 ಎಸೆತಗಳಲ್ಲಿ 59 ರನ್ ಗಳಿಸಿದರು. ಅದರಲ್ಲೂ ಸೂರ್ಯಕುಮಾರ್ ಕೊನೆಯ ಓವರ್ ನಲ್ಲೇ ನಾಲ್ಕು ಸಿಕ್ಸರ್ ಸಿಡಿಸಿ ಅಬ್ಬರಿಸಿದರು.

ಬಳಿಕ ಬ್ಯಾಟಿಂಗ್ ಮಾಡಿದ ಹಾಂಗ್ ಕಾಂಗ್ ಕೂಡಾ ಉತ್ತಮ ಪ್ರತಿರೋಧವೊಡ್ಡಿತು. 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಬರ್ ಹಯಾತ್ 41, ಕಿನ್ ಚಿತ್ ಶಾ 30, ಝೀಶಾನ್ ಅಲಿ 26 ರನ್ ಗಳಿಸಿದರು. ಅದರಲ್ಲೂ ಅರ್ಷ್ ದೀಪ್ ಸಿಂಗ್ 1 ವಿಕೆಟ್ ಕಬಳಿಸಿದರೂ 4 ಓವರ್ ಗಳ ಕೋಟಾದಲ್ಲಿ 44 ರನ್ ಬಿಟ್ಟುಕೊಟ್ಟರು! ಉಳಿದಂತೆ ಆವೇಶ್ ಖಾನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೌತಮ್ ಗಂಭೀರ್ ಮಾತ್ರ ಬೇಡಪ್ಪ.. ಟೀಂ ಇಂಡಿಯಾ ಕೋಚ್ ಗೆ ಐರ್ಲೆಂಡ್ ನಿಂದ ಎಂಥಾ ಅವಮಾನ

ICC Women’s T20 WC: ಭಾರತ ವನಿತೆಯರ ಸೋಲಿಗೆ ಇದೇ ಮೂರು ಕಾರಣ

ಸ್ಟಾರ್ ಸಂಸ್ಕೃತಿ ಕೊನೆಗಾಣಿಸ್ತೀನಿ ಎಂದು ಬಂದು ಟೀಂ ಇಂಡಿಯಾವನ್ನೇ ಫಿನಿಶ್ ಮಾಡಿದ್ರಲ್ಲೋ ಗಂಭೀರ್, ಅಗರ್ಕರ್

T20 World Cup: ಹೀನಾಯ ಸೋಲಿನೊಂದಿಗೆ ಗುಂಪು ಹಂತದಲ್ಲೇ ಹೊರಬಿದ್ದ ಭಾರತದ ವನಿತೆಯರು

INDW vs AUSW: ಆಸ್ಟ್ರೇಲಿಯಾ ವಿರುದ್ಧ ತಾನು ಸಿಂಹಿಣಿಯೇ ಎಂದು ಪ್ರೂವ್ ಮಾಡಿದ ಹರ್ಮನ್ ಪ್ರೀತ್ ಕೌರ್

ಮುಂದಿನ ಸುದ್ದಿ
Show comments