Publish Date: Thu, 30 Dec 2021 (16:32 IST)
Updated Date: Thu, 30 Dec 2021 (16:33 IST)
ಸೆಂಚೂರಿಯನ್: ಕಾಮನಬಿಲ್ಲಿನ ನಾಡಿನಲ್ಲಿ ಗೆಲುವು ಹುಡುಕಿ ಹೊರಟ ಟೀಂ ಇಂಡಿಯಾಗೆ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಿಕ್ಕಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾವನ್ನು 113 ರನ್ ಗಳಿಂದ ಸೋಲಿಸಿದೆ.
305 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ಇಂದು ಐದನೇ ದಿನ 191 ರನ್ ಗಳಿಗೆ ಆಲೌಟ್ ಆಗಿದೆ. ಇಂದು ಆಫ್ರಿಕಾ ಪರ ತೆಂಬಾ ಬವುಮಾ ಹೋರಾಟ ನಡೆಸಿ ಅಜೇಯ 35 ರನ್ ಗಳಿಸಿದರು. ಆದರೆ ಈ ಅಲ್ಪ ಮೊತ್ತ ಎಲ್ಲಿಗೂ ಸಾಲಲಿಲ್ಲ.
ಭಾರತದ ಪರ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ತಲಾ 3 ಮತ್ತು ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಮೊಹಮ್ಮದ್ ಶಮಿ ಮೊದಲ ಇನಿಂಗ್ಸ್ ನಲ್ಲೂ 5 ವಿಕೆಟ್ ಕಬಳಿಸಿದ್ದರು. ಇದು ಆಫ್ರಿಕಾ ನೆಲದಲ್ಲಿ ಭಾರತದ ಕೇವಲ ನಾಲ್ಕನೇ ಟೆಸ್ಟ್ ಗೆಲುವಾಗಿದೆ.