ಮಧ್ಯಮರ ಪರಾಕ್ರಮದಿಂದ ಗೆದ್ದ ಟೀಂ ಇಂಡಿಯಾ

Webdunia
ಭಾನುವಾರ, 27 ಫೆಬ್ರವರಿ 2022 (08:40 IST)
ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ದ್ವಿತೀಯ ಪಂದ್ಯವನ್ನು ಭರ್ಜರಿಯಾಗಿ 7 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈ ವಶ ಮಾಡಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. ಆದರೆ ಮಧ‍್ಯಮ ಕ್ರಮಾಂಕದ ಬ್ಯಾಟರ್ ಗಳಿಂದಾಗಿ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಆರಂಭಿಕರಾದ ರೋಹಿತ್ ಶರ್ಮಾ (1), ಇಶಾನ್ ಕಿಶನ್ (16) ಬೇಗನೇ ಔಟಾದರು. ಆದರೆ ಈ ಸಂದರ್ಭದಲ್ಲಿ ಮಧ‍್ಯಮ ಕ್ರಮಾಂಕ ತಂಡದ ಕೈ ಹಿಡಿಯಿತು. ಸಂಜು ಸ್ಯಾಮ್ಸನ್ 39 ರನ್ ಗಳಿಸಿ ಔಟಾದರು. ಆದರೆ ನಂತರ ಶ್ರೇಯಸ್ ಅಯ್ಯರ್ ಮತ್ತೊಂದು ಜಬರ್ದಸ್ತ್ ಇನಿಂಗ್ಸ್ ಆಡಿದರು. ಕೇವಲ 44 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು.

ಇನ್ನೊಂದೆಡೆ ಅವರಿಗೆ ತಕ್ಕ ಸಾಥ್ ನೀಡಿದ ರವೀಂದ್ರ ಜಡೇಜಾ 18 ಎಸೆತಗಳಿಂದ 45 ರನ್ ಗಳಿಸಿ ಗೆಲುವಿನ ರನ್ ಬಾರಿಸಿದರು. ಇದರೊಂದಿಗೆ ರೋಹಿತ್ ಪಡೆ ಸತತ ಎರಡು ಟಿ20 ಸರಣಿಯನ್ನು ಗೆದ್ದುಕೊಂಡಂತಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಸೂರ್ಯಕುಮಾರ್‌ ಹೆಗಲಿಗೆ ಟಿ20 ನಾಯಕತ್ವ ಜವಾಬ್ದಾರಿ, ಕಾಪು ಮಾರಿಗುಡಿಗೆ ಪತ್ನಿ ಭೇಟಿ

ಒಂದೇ ಬೆಡ್, ನಾಲ್ವರು ಫ್ರೆಂಡ್ಸ್.. ಬಾಯ್ಸ್ ಮೀರಿಸಿದ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್

ಜೀಸಸ್ ಈವತ್ತು ರಜಾ ಇದ್ದ ಅನ್ಸುತ್ತೆ.. ಜೆಮಿಮಾ ರೊಡ್ರಿಗಸ್ ರನ್ನು ಹೀಗಾ ಟ್ರೋಲ್ ಮಾಡೋದು

ಗೌತಮ್ ಗಂಭೀರ್ ಗೆ ಸಾಕಾ ಇನ್ನೂ ಬೇಕಾ.. ನೆಟ್ಟಿಗರಿಂದ ತಪರಾಕಿ

ಮುಂದಿನ ಸುದ್ದಿ
Show comments