Select Your Language

Notifications

webdunia
webdunia
webdunia
webdunia

ವಿಂಡೀಸ್ ವಿರುದ್ಧ ಆಡುವ ನಡುವೆಯೂ ಮಹಿಳಾ ಕ್ರಿಕೆಟಿಗರ ಫೈನಲ್ ಮೊಬೈಲ್ ನಲ್ಲೇ ವೀಕ್ಷಿಸಿದ ಟೀಂ ಇಂಡಿಯಾ!

ಟೀಂ ಇಂಡಿಯಾ
Photo Courtesy: Instagram
ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಕೊನೆಯ ಪಂದ್ಯ ಒಂದೆಡೆಯಾದರೆ ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ನಲ್ಲಿ ಆಡುವ ಕುತೂಹಲ ಇನ್ನೊಂದೆಡೆ. ಅಂತೂ ನಿನ್ನೆ ರೋಹಿತ್ ಶರ್ಮಾ ಬಳಗಕ್ಕೂ ತಮ್ಮ ಆಟಕ್ಕಿಂತ ಮಹಿಳೆಯರ ಆಟದ ಬಗ್ಗೆ ಹೆಚ್ಚು ಗಮನವಿತ್ತು!

ನಿನ್ನೆಯ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದರು. ಹೀಗಾಗಿ ತಮ್ಮದೇ ತಂಡದ ಪಂದ್ಯವಿದ್ದರೂ ಡ್ರೆಸ್ಸಿಂಗ್ ರೂಂನಲ್ಲಿ ಮೊಬೈಲ್ ಮೂಲಕ ಮಹಿಳೆಯರ ಪಂದ್ಯ ವೀಕ್ಷಿಸುತ್ತಿದ್ದರು. ವಿಶೇಷವೆಂದರೆ ಕೋಚ್ ದ್ರಾವಿಡ್ ಸೇರಿದಂತೆ ಇತರ ಕ್ರಿಕೆಟಿಗರೂ ರೋಹಿತ್ ಸುತ್ತ ನೆರೆದು ಮೊಬೈಲ್ ನಲ್ಲಿ ಪಂದ್ಯ ನೋಡುವುದರಲ್ಲಿ ಬ್ಯುಸಿಯಾಗಿದ್ದರು!

ಈ ಫೋಟೋಗಳನ್ನು ಭಾರತೀಯ ಕ್ರಿಕೆಟ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಟೀಂ ಇಂಡಿಯನ್ನರು ಮೊಬೈಲ್ ನಲ್ಲಿ ಪಂದ್ಯ ನೋಡುವ ತನ್ಮಯತೆ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ನಲ್ಲಿ ಕಂಚು ಗೆದ್ದ ಪತ್ನಿ ದೀಪಿಕಾ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದು ಹೀಗೆ!