ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 88 ರನ್ ಗಳೊಂದಿಗೆ ಗೆಲ್ಲುವುದರೊಂದಿಗೆ ಸರಣಿ 4-1 ಅಂತರದಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಪಡೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ 15.4 ಓವರ್ ಗಳಲ್ಲಿ ಭರ್ತಿ 100 ರನ್ ಗೆ ಆಲೌಟ್ ಆಯಿತು.
ವೆಸ್ಟ್ ಇಂಡೀಸ್ ಪರ ಹೆಟ್ಮೈರ್ 56 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸಾಧನೆ ಅಷ್ಟಕ್ಕಷ್ಟೇ ಆಗಿತ್ತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ರವಿ ಬಿಷ್ಣೋಯ್ 4 ವಿಕೆಟ್ ಕಬಳಿಸಿದರೆ, ಅಕ್ಸರ್ ಪಟೇಲ್ , ಕುಲದೀಪ್ ಯಾದವ್ ತಲಾ 3 ತಮ್ಮದಾಗಿಸಿಕೊಂಡರು. ಪ್ರಮುಖ 3 ವಿಕೆಟ್ ಪಡೆದ ಅಕ್ಸರ್ ಪಟೇಲ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದರೆ, ಸರಣಿಯುದ್ಧಕ್ಕೂ ಉತ್ತಮ ಬೌಲಿಂಗ್ ಮಾಡಿದ್ದ ಯುವ ವೇಗಿ ಅರ್ಷ್ ದೀಪ್ ಸಿಂಗ್ ಸರಣಿ ಶ್ರೇಷ್ಠರಾದರು.