ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶ್ರೇಯಸ್ ಬಿರುಸಿನ ಅರ್ಧಶತಕ ಸಿಡಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 14 ಓವರ್ ಗಳಲ್ಲಿ 133 ರನ್ ಗಳಿಸಿದೆ. ಇಂದು ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದು ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಆರಂಭಿಕರಾಗಿ ರೋಹಿತ್ ಸ್ಥಾನಕ್ಕೆ ಬಂದ ಇಶಾಂತ್ ಶರ್ಮಾ ಕೇವಲ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ದೀಪಕ್ ಹೂಡಾ ಜೊತೆ (38) ಬಿರುಸಿನ ಆಟಕ್ಕೆ ಕೈ ಹಾಕಿದ ಶ್ರೇಯಸ್ ಅಯ್ಯರ್ 40 ಎಸೆತಗಳಿಂದ 64 ರನ್ ಸಿಡಿಸಿ ಔಟಾದರು. ಇದೀಗ ಸಂಜು ಸ್ಯಾಮ್ಸನ್ 9, ಹಾರ್ದಿಕ್ 5 ರನ್ ಗಳೊಂದಿಗೆ ಕ್ರೀಸ್ ನಲ್ಲಿದ್ದಾರೆ.