Publish Date: Tue, 29 Oct 2019 (10:37 IST)
Updated Date: Tue, 29 Oct 2019 (10:39 IST)
ನವದೆಹಲಿ: ಬಾಂಗ್ಲಾದೇಶ ವಿರುದ್ಧ ನವಂಬರ್ 3 ರಂದು ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯದ ಮೇಲೆ ಇದೀಗ ಹಲವು ಆತಂಕಗಳ ಕಾರ್ಮೋಡ ಕವಿದಿದೆ.
ಈ ಮೊದಲು ವಾಯು ಮಾಲಿನ್ಯದಿಂದಾಗಿ ಪಂದ್ಯ ನಡೆಸಲು ತೊಂದರೆಯಾಗಬಹುದು ಎಂಬ ಆತಂಕವಿತ್ತು. ಅದರ ಜತೆಗೆ ಇದೀಗ ಮತ್ತೊಂದು ಗಂಭೀರ ಅಪಾಯ ಎದುರಾಗಿದೆ.
ರಾಷ್ಟ್ರೀಯ ತನಿಖಾ ದಳ ಎನ್ ಐಎ ಬಿಸಿಸಿಐಗೆ ಕ್ರಿಕೆಟಿಗರ ಜೀವಕ್ಕೆ ಅಪಾಯವಿದೆ ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ದೆಹಲಿಯಲ್ಲಿ ಕ್ರಿಕೆಟಿಗರ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರಿಗೆ ಭದ್ರತೆ ನೀಡಲು ಸೂಚಿಸಲಾಗಿದೆ. ಇದರ ಜತೆಗೆ ಬಾಂಗ್ಲಾದೇಶ ಕ್ರಿಕೆಟ್ ನಲ್ಲೂ ಆಂತರಿಕ ಬಿಕ್ಕಟ್ಟು ತಲೆದೋರಿದ್ದು, ಯಾವ ಕ್ರಿಕೆಟಿಗರು ಭಾರತಕ್ಕೆ ಬರಲಿದ್ದಾರೆ ಎನ್ನುವುದೇ ಅನುಮಾನವಾಗಿದೆ.