Select Your Language

Notifications

webdunia
webdunia
webdunia
Wednesday, 16 April 2025
webdunia

ವಾಯುಮಾಲಿನ್ಯವಿದ್ದರೂ ಡೆಲ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾ ಟಿ20

ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸರಣಿ
ನವದೆಹಲಿ , ಮಂಗಳವಾರ, 29 ಅಕ್ಟೋಬರ್ 2019 (09:11 IST)
ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲು ಈ ಸಮಯದಲ್ಲಿ ವಾಯು ಮಾಲಿನ್ಯದ್ದೇ ಸಮಸ್ಯೆ. ಹಲವಾರು ಬಾರಿ ಪಂದ್ಯಗಳು ಮಾಲಿನ್ಯಯುಕ್ತ ಗಾಳಿಯಿಂದಾಗಿ ರದ್ದಾಗಿದ್ದೂ ಇದೆ.


ಇದೇ ಸಮಸ್ಯೆ ಇದೀಗ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಪಂದ್ಯಕ್ಕೂ ಆವರಿಸದೆ. ನವಂಬರ್ 3 ರಂದು ಇಲ್ಲಿ ಟಿ20 ಪಂದ್ಯ ನಡೆಯಲಿದ್ದು, ವಾಯು ಮಾಲಿನ್ಯದ್ದೇ ಚಿಂತೆಯ ವಿಷಯವಾಗಿದೆ.

ಹಾಗಿದ್ದರೂ ಇದೇ ಕ್ರೀಡಾಂಗಣದಲ್ಲೇ ಪಂದ್ಯ ನಡೆಸುವುದಾಗಿ ಬಿಸಿಸಿಐ ಹೇಳಿದೆ. ಸದ್ಯಕ್ಕೆ ಪಂದ್ಯದ ಸ್ಥಳದಲ್ಲಿ ಬದಲಾವಣೆಯಿಲ್ಲ ಎಂದಿದೆ. ಹಿಂದೊಮ್ಮೆ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ಆಟಗಾರರು ಮಾಲಿನ್ಯದಿಂದಾಗಿ ಉಸಿರಾಡಲೂ ಕಷ್ಟಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ – 20 ಯಲ್ಲಿ ಅತೀ ಹೆಚ್ಚು ರನ್ ನೀಡಿ ಕುಖ್ಯಾತಿ ಪಡೆದ ಬೌಲರ್