Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಕ್ಕೆ ಬೇಕಿರುವುದು ಇನ್ನು ಮೂರೇ ರನ್!

ಟೀಂ ಇಂಡಿಯಾಕ್ಕೆ ಬೇಕಿರುವುದು ಇನ್ನು ಮೂರೇ ರನ್!
ಹೈದರಾಬಾದ್ , ಶನಿವಾರ, 13 ಅಕ್ಟೋಬರ್ 2018 (17:17 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿದೆ.

ಇದರೊಂದಿಗೆ ವಿಂಡೀಸ್ ಗಳಿಸಿದ್ದ 311 ರನ್ ಗಳ ಮೊದಲ ಇನಿಂಗ್ಸ್ ಮೊತ್ತ ದಾಟಲು ಟೀಂ ಇಂಡಿಯಾಕ್ಕೆ ಕೇವಲ 3 ರನ್ ಗಳ ಅಗತ್ಯವಿದೆ. ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿರುವ ಪ್ರವಾಸಿಗರು ಟೀಂ ಇಂಡಿಯಾದ ಪ್ರಮುಖ ನಾಲ್ಕು ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭಿಕ ಪೃಥ್ವಿ ಶಾ 72 ರನ್ ಗಳಿಸಿದರೆ ನಾಯಕ ಕೊಹ್ಲಿ 45, ಚೇತೇಶ್ವರ ಪೂಜಾರ 10, ಕೆಎಲ್ ರಾಹುಲ್ 4 ರನ್ ಗಳಿಸಿದರು. ಇವರ ಪತನದ ನಂತರ ಜತೆಯಾದ ಉಪನಾಯಕ ಅಜಿಂಕ್ಯಾ ರೆಹಾನೆ ಮತ್ತು ರಿಷಬ್ ಪಂತ್ ಮುರಿಯದ ಐದನೇ ವಿಕೆಟ್ ಗೆ 146 ರನ್ ಗಳ ಜತೆಯಾಟವಾಡಿದ್ದಾರೆ. ಇದರಲ್ಲಿ ರೆಹಾನೆ 75 ರನ್ ಗಳಿಸಿದರೆ, ಪಂತ್ 85 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಕೆಎಲ್ ರಾಹುಲ್ ಭವಿಷ್ಯಕ್ಕೇ ಕುತ್ತು!