Publish Date: Mon, 09 Nov 2020 (09:51 IST)
Updated Date: Mon, 09 Nov 2020 (09:52 IST)
ದುಬೈ: ಐಪಿಎಲ್ ಬಳಿಕ ಆಸ್ಟ್ರೇಲಿಯಾ ಸರಣಿಗೆ ಸಿದ್ಧತೆ ಮಾಡಿಕೊಳ್ಳಲು ಟೀಂ ಇಂಡಿಯಾ ಕ್ರಿಕೆಟಿಗರು ನವಂಬರ್ 13 ರಿಂದ ಅಭ್ಯಾಸ ಶುರು ಮಾಡಲಿದ್ದಾರೆ.
ನವಂಬರ್ 12 ರಂದು ಭಾರತೀಯ ತಂಡ ಆಸ್ಟ್ರೇಲಿಯಾ ತಲುಪಲಿದೆ. ತಕ್ಷಣವೇ ಅಲ್ಲಿ ಕೊರೋನಾ ಟೆಸ್ಟ್ ಗೊಳಗಾಗಲಿದೆ. ನೆಗೆಟಿವ್ ವರದಿ ಬಂದ ಕ್ರಿಕೆಟಿಗರು ತಕ್ಷಣದಿಂದಲೇ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಈಗಾಗಲೇ ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ಹನುಮ ವಿಹಾರಿ ಜೈವ ಸುರಕ್ಷ ವಲಯದಲ್ಲಿ ಕೂಡಿಕೊಂಡಿದ್ದಾರೆ ಎನ್ನಲಾಗಿದೆ. ಐಪಿಎಲ್ ಮುಗಿದ ತಕ್ಷಣ ಎಲ್ಲಾ ಆಟಗಾರರೂ ಆಸ್ಟ್ರೇಲಿಯಾ ವಿಮಾನವೇರಲಿದ್ದಾರೆ.