Publish Date: Fri, 22 Jun 2018 (09:24 IST)
Updated Date: Fri, 22 Jun 2018 (09:25 IST)
ಮುಂಬೈ: ವಿಶ್ವದ ಕ್ರಿಕೆಟ್ ತಂಡಗಳ ಪೈಕಿ ಅತ್ಯಂತ ಬಿಗುವಿನ ವೇಳಾ ಪಟ್ಟಿ ಹೊಂದಿರುವ ತಂಡವೆಂದರೆ ಭಾರತವೇ ಇರಬೇಕು. ಐಸಿಸಿ ಬಿಡುಗಡೆಗೊಳಿಸಿರುವ ಐದು ವರ್ಷಗಳ ವೇಳಾಪಟ್ಟಿಯಲ್ಲಿ ಟೀಂ ಇಂಡಿಯಾ ಆಡಬೇಕಾಗಿರುವ ಅಂತಾರಾಷ್ಟ್ರೀಯ ಪಂದ್ಯಗಳ ಸಂಖ್ಯೆ ಎಷ್ಟು ಎಂದು ಬಹಿರಂಗವಾಗಿದೆ.
ಐದು ವರ್ಷಗಳ ಅವಧಿಗೆ ಭಾರತ ಒಟ್ಟು 203 ಅಂತಾರಾಷ್ಟ್ರೀಯ ಪಂದ್ಯವಾಡಬೇಕಿದೆ. ಇದರಲ್ಲಿ 51 ಟೆಸ್ಟ್ ಪಂದ್ಯ, 83 ಏಕದಿನ, 69 ಟಿ20 ಪಂದ್ಯಗಳು ಒಳಗೊಂಡಿವೆ.
ಅತ್ಯಧಿಕ ಪಂದ್ಯಗಳನ್ನಾಡುವ ರಾಷ್ಟ್ರಗಳ ಪೈಕಿ ಭಾರತಕ್ಕೆ ಮೊದಲ ಸ್ಥಾನವಾದರೆ 183 ಪಂದ್ಯಗಳೊಂದಿಗೆ ವೆಸ್ಟ್ ಇಂಡೀಸ್ ದ್ವಿತೀಯ ಸ್ಥಾನದಲ್ಲಿದೆ. 175 ಪಂದ್ಯಗಳಾಡಲಿರುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಹಾಗಿದ್ದರೂ ಇಂಗ್ಲೆಂಡ್ ಅತೀ ಹೆಚ್ಚು 59 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.