Publish Date: Fri, 22 Jun 2018 (09:17 IST)
Updated Date: Fri, 22 Jun 2018 (09:22 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂತಹಾ ಅಗ್ರೆಸಿವ್ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತು. ಅವರೊಂದಿಗೆ ಬ್ಯಾಟಿಂಗ್ ಮಾಡುವುದೂ ಖುಷಿಕೊಡುವುದರ ಜತೆಗೆ ಕೆಲವೊಮ್ಮೆ ಕಷ್ಟವೂ ಆಗುತ್ತದೆಂದು ಟಾಕ್ ಶೋ ಒಂದರಲ್ಲಿ ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ.
ರಾಹುಲ್ ಜತೆಗೆ ರವಿಚಂದ್ರನ್ ಅಶ್ವಿನ್ ಕೂಡಾ ಈ ಟಾಕ್ ಶೋನಲ್ಲಿ ಭಾಗವಹಿಸಿದ್ದರು. ಇಬ್ಬರೂ ವಿರಾಟ್ ಜತೆಗೆ ಬ್ಯಾಟಿಂಗ್ ಮಾಡುವಾಗ ನಡೆಯುವ ಸ್ವಾರಸ್ಯಕರ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
‘ವಿರಾಟ್ ತುಂಬಾ ಅಗ್ರೆಸಿವ್. ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವಾಗ ನಮ್ಮನ್ನು ತಮ್ಮ ಅಗ್ರೆಸಿವ್ ಶೈಲಿಯಲ್ಲೇ ಹುರಿದುಂಬಿಸುತ್ತಿರುತ್ತಾರೆ. ಒಂದು ಬೌಂಡರಿ ಹೊಡೆದರೂ ಎಂತಹಾ ಹೊಡೆತ ಹೊಡೆದೆ. ಹೀಗೇ ಮುಂದುವರಿಸು, ಕಮಾನ್ ಎಂದು ಬೌಲರ್ ಗೆ ಕೆಣಕುವ ರೀತಿ ಹೇಳುತ್ತಿರುತ್ತಾರೆ. ಅಸಲಿಗೆ ನಾವು ಆ ಬೌಂಡರಿಯನ್ನು ಅದೃಷ್ಟವಶಾತ್ ಹೊಡೆದಿರುತ್ತೇವೆ. ಆದರೆ ಆತನ ಅಗ್ರೆಸಿವ್ ನೆಸ್ ನೋಡಿದರೆ ನಮಗೆ ಕಷ್ಟವಾಗುತ್ತದೆ’ ಎಂದು ರಾಹುಲ್ ಮತ್ತು ಅಶ್ವಿನ್ ತಮಾಷೆಯಾಗಿ ಕ್ಯಾಪ್ಟನ್ ಬಗ್ಗೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.