ದುಬೈ: 2023 ರ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆದ ಟೀಂ ಇಂಡಿಯಾ ಆಡಲ್ಲ ಎಂದು ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.
ಆದರೆ ಈಗ ಪಾಕಿಸ್ತಾನವೇ ಆತಿಥ್ಯ ವಹಿಸಿದರೂ ಏಷ್ಯಾ ಕಪ್ ನಲ್ಲಿ ಭಾರತ ಆಡಲಿದೆ. ಅದು ಹೇಗೆ ಅಂತೀರಾ? ಅದಕ್ಕೆ ಒಂದು ಉಪಾಯ ಮಾಡಲಾಗಿದೆ.
2023 ರ ಏಷ್ಯಾ ಕಪ್ ನ್ನು ಪಾಕಿಸ್ತಾನ ಮತ್ತು ಯುಎಇ ಜಂಟಿಯಾಗಿ ಆಯೋಜಿಸಲಿದೆ. ಭಾರತ ಆಡಲಿರುವ ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಭಾರತ ಏಷ್ಯಾ ಕಪ್ ನಿಂದ ಹೊರಹೋಗದಂತೆ ನೋಡಿಕೊಳ್ಳಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬರಲಿದೆ.