Publish Date: Tue, 09 Feb 2021 (08:51 IST)
Updated Date: Tue, 09 Feb 2021 (08:52 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಟೀಂ ಇಂಡಿಯಾ ಹರಸಾಹಸ ಪಡುತ್ತಿದೆ. ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿತ್ತು.
ಇಂದು ಪಂದ್ಯದ ಐದನೇ ದಿನವಾಗಿದ್ದು, ಅಂತಿಮ ದಿನದ ಪಿಚ್ ನಲ್ಲಿ ವಿಕೆಟ್ ಉಳಿಸಿಕೊಳ್ಳುವುದರ ಜೊತೆಗೆ ದೊಡ್ಡ ಮೊತ್ತ ಚೇಸ್ ಮಾಡುವ ಸವಾಲು ಭಾರತದ ಮುಂದಿದೆ. ಈಗಾಗಲೇ ಅನುಭವಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿರುವುದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಐದನೇ ದಿನದಲ್ಲಿ ಚೆನ್ನೈ ಮೈದಾನದಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್ ಮನ್ ಗಳಿಗೆ ಬ್ಯಾಟಿಂಗ್ ನಡೆಸುವುದು ಕಷ್ಟವಾಗುತ್ತದೆ. ಸ್ಪಿನ್ನರ್ ಸ್ನೇಹಿಯಾಗಿ ತಿರುವು ಪಡೆಯತ್ತದೆ. ಹೀಗಾಗಿ ಈ ಐದನೇ ದಿನದ ಸವಾಲನ್ನು ಭಾರತ ಹೇಗೆ ಸ್ವೀಕರಿಸುತ್ತದೆ ಎಂದು ಕಾದು ನೋಡಬೇಕಿದೆ. ಭಾರತದ ಗೆಲುವಿಗೆ ಇನ್ನೂ 381 ರನ್ ಗಳ ಅಗತ್ಯವಿದೆ.