ನಾಲ್ಕನೇ ಟೆಸ್ಟ್ ಆಡಲಿರುವ ಟೀಂ ಇಂಡಿಯಾಗೆ ಆರ್ ಅಶ್ವಿನ್ ರದ್ದೇ ಚಿಂತೆ!

ಬುಧವಾರ, 29 ಆಗಸ್ಟ್ 2018 (08:55 IST)
ಲಂಡನ್: ಸೌಥಾಂಪ್ಟನ್ ನಲ್ಲಿ ನಾಳೆಯಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ತವಕದಲ್ಲಿರುವ ಟೀಂ ಇಂಡಿಯಾಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಚಿಂತೆ ಕಾಡತೊಡಗಿದೆ.

ಗಾಯಗೊಂಡಿರುವ ಅಶ್ವಿನ್ ಇನ್ನೂ ಸರಿಯಾಗಿ ಚೇತರಿಸದೇ ಇರುವುದರಿಂದ ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಲಿದೆ. ನಿನ್ನೆ ಕೂಡಾ ಅಶ್ವಿನ್ ನೆಟ್ ಪ್ರಾಕ್ಟೀಸ್ ನಲ್ಲಿ ಪಾಲ್ಗೊಳ್ಳದೇ ಇರುವುದು ಅವರ ಫಿಟ್ ನೆಸ್ ಬಗ್ಗೆ ಮತ್ತಷ್ಟು ಅನುಮಾನ ಮೂಡಿದೆ.

ಅಶ್ವಿನ್ ತೃತೀಯ ಟೆಸ್ಟ್ ಬಿಟ್ಟರೆ ಉಳಿದೆರಡೂ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದ್ದರು. ಹೀಗಾಗಿ ಅವರ ಫಿಟ್ ನೆಸ್ ಟೀಂ ಇಂಡಿಯಾಗೆ ಮುಖ್ಯವಾಗಲಿದೆ. ಒಂದು ಅಶ್ವಿನ್ ಆಡದೇ ಹೋದಲ್ಲಿ ಅವರ ಸ್ಥಾನಕ್ಕೆ ರವೀಂದ್ರ ಜಡೇಜಾ ಆಗಮಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದರೂ ಪಿವಿ ಸಿಂಧುಗೆ ಖುಷಿಯಾಗಿಲ್ಲ ಯಾಕೆ?!