Select Your Language

Notifications

webdunia
webdunia
webdunia
webdunia

ಭಾರತ-ನ್ಯೂಜಿಲೆಂಡ್ ಟೆಸ್ಟ್: ಕುಂಟುತ್ತಾ ಸಾಗಿದ ಟೀಂ ಇಂಡಿಯಾ ಇನಿಂಗ್ಸ್

ಭಾರತ-ನ್ಯೂಜಿಲೆಂಡ್ ಟೆಸ್ಟ್: ಕುಂಟುತ್ತಾ ಸಾಗಿದ ಟೀಂ ಇಂಡಿಯಾ ಇನಿಂಗ್ಸ್
ವೆಲ್ಲಿಂಗ್ಟನ್ , ಶುಕ್ರವಾರ, 21 ಫೆಬ್ರವರಿ 2020 (09:03 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ದಿನದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕಟ್ ನಷ್ಟಕ್ಕೆ 122 ರನ್ ಗಳಿಸಿದೆ.


ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಭಾರತದ ಆಟಗಾರರು ಕಿವೀಸ್ ದಾಳಿಯ ಎದುರು ಸಮರ್ಥವಾಗಿ ನಿಂತು ಆಡುವ ಧೈರ್ಯ ಮಾಡಲಿಲ್ಲ. ಇದ್ದವರ ಪೈಕಿ ಮಯಾಂಕ್ ಅಗರ್ವಾಲ್ 34 ರನ್ ಗಳಿಸಿದರೆ ಇನ್ನೊಬ್ಬ ಆರಂಭಿಕ ಪೃಥ್ವಿ ಶಾ 16 ರನ್ ಗೆ ವಿಕೆಟ್ ಒಪ್ಪಿಸಿದರು. ಏಕದಿನ ಪಂದ್ಯಗಳಲ್ಲಿನ ಕಳಪೆ ಫಾರ್ಮ್ ಮುಂದುವರಿಸಿದ ನಾಯಕ ಕೊಹ್ಲಿ ಕೇವಲ 2 ರನ್ ಗೆ ವಿಕೆಟ್ ಒಪ್ಪಿಸಿದರು. ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 11 ರನ್ ಗೆ ಔಟಾದರು.

ಉಳಿದಂತೆ ಹನುಮ ವಿಹಾರಿ 7 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಸದ್ಯಕ್ಕೆ ಅಜಿಂಕ್ಯಾ ರೆಹಾನ್ 38 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ ಅವರಿಗೆ ತಕ್ಕ ಸಾಥ್ ನೀಡುತ್ತಿರುವ ವಿಕೆಟ್ ಕೀಪರ್ ರಿಷಬ್ ಪಂತ್ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕಿವೀಸ್ ಪರ ಕೈಲ್ ಜೆಮಿಸನ್ 3 ವಿಕೆಟ್ ಕಬಳಿಸಿದರೆ, ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಕರ್ನಾಟಕದ ಮೇಲೆ ಸಂಕಟದ ಮೋಡ