ಮಳೆ ನಡುವೆ ಟೀಂ ಇಂಡಿಯಾ ಶೈನಿಂಗ್

Webdunia
ಶನಿವಾರ, 2 ಜುಲೈ 2022 (21:08 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಮಳೆ ನಡುವೆಯೂ ಟೀಂ ಇಂಡಿಯಾ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ 416 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಅಲೆಕ್ಸ್ ಲೀಸ್ (6) ವಿಕೆಟ್ ಕಳೆದುಕೊಂಡಿತು. ನಡುವೆ ನಡುವೆ ವರುಣ ರಾಯನ ಆಗಮನಾಗಿದ್ದು, ಇದೀಗ ಮಳೆಯಿಂದಾಗಿ ಕೆಲವು ಕಾಲ ಆಟ ಸ್ಥಗಿತಗೊಂಡಿದೆ.

ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ 60 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಈ ಮೂರೂ ವಿಕೆಟ್ ನಾಯಕ ಜಸ್ಪ್ರೀತ್ ಬುಮ್ರಾ ಪಾಲಾಗಿದೆ. ಇದೀಗ ಕ್ರೀಸ್ ನಲ್ಲಿ 19 ರನ್ ಗಳಿಸಿರುವ ಜೋ ರೂಟ್ ಮತ್ತು 6 ರನ್ ಗಳಿಸಿರುವ ಜಾನಿ ಬೇರ್ ಸ್ಟೋ ಕ್ರೀಸ್ ನಲ್ಲಿದ್ದಾರೆ. ಇದೀಗ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇಂಗ್ಲೆಂಡ್ 356 ರನ್ ಗಳಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ರನ್ ಲೀಕಿಂಗ್ ಮೆಷಿನ್ ಗಳಾದ ಟೀಂ ಇಂಡಿಯಾ ಬೌಲರ್ ಗಳು, ನ್ಯೂಜಿಲೆಂಡ್ ಬೃಹತ್ ಮೊತ್ತ

ನಾ ಡ್ರೈವರಾ... ಶ್ರೇಯಾಂಕ ಪಾಟೀಲ್ ಡ್ಯಾನ್ಸ್: ಸ್ಮೃತಿ ಮಂಧಾನ ರಿಯಾಕ್ಷನ್ ಮಾತ್ರ ಮಿಸ್ ಮಾಡ್ಲೇಬೇಡಿ video

IND vs NZ: ನ್ಯೂಜಿಲೆಂಡ್ ವಿರುದ್ಧ ಇಂದು ಕಣಕ್ಕಿಳಿಯುತ್ತಾರಾ ಸಂಜು ಸ್ಯಾಮ್ಸನ್

WPL 2026: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ವಿರುದ್ಧ ಫೀಲ್ಡಿಂಗ್ ಆಯ್ಕೆ

ಸಂಜು ಸ್ಯಾಮ್ಸನ್ ಈ ಕಾರಣಕ್ಕಾದರೂ ಮತ್ತೆ ಫಾರ್ಮ್ ಗೆ ಬರಬೇಕು

ಮುಂದಿನ ಸುದ್ದಿ
Show comments