ಟೆಸ್ಟ್ ನಲ್ಲಿ ಟಿ20 ಆಟ: ಜಡೇಜಾ, ಬುಮ್ರಾ ಅಬ್ಬರಕ್ಕೆ ಟೀಂ ಇಂಡಿಯಾ 400

Webdunia
ಶನಿವಾರ, 2 ಜುಲೈ 2022 (16:08 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 416 ರನ್ ಗಳಿಗೆ ಆಲೌಟ್ ಆಗಿದೆ.

ಇಂದು ದ್ವಿತೀಯ ದಿನದಾಟದಲ್ಲಿ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನಲ್ಲಿ ಮಿಂಚಿದರೆ ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಐದು ವಿಕೆಟ್ ಪಡೆದು ಮಿಂಚಿದರು. ಜಡೇಜಾ ಇಂದು 104 ರನ್ ಗಳ ಇನಿಂಗ್ಸ್ ಆಡಿದ್ದು, ಇದು ಅವರ ಟೆಸ್ಟ್ ವೃತ್ತಿ ಜೀವನದ 2 ನೇ ಶತಕವಾಗಿದೆ.

ಇನ್ನು, ನಾಯಕ ಜಸ್ಪ್ರೀತ್ ಬುಮ್ರಾ ಕೆಳ ಕ್ರಮಾಂಕದಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ್ದು, ಕೇವಲ 16 ಎಸೆತಗಳಿಂದ 31 ರನ್ ಗಳಿಸಿದರು. ಸ್ಟುವರ್ಟ್ ಬ್ರಾಡ್ ಎಸೆದ ಒಂದು ಓವರ್ ನಲ್ಲಿ ಬರೋಬ್ಬರಿ 35 ರನ್ ಚಚ್ಚಿದ್ದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಇದರಿಂದಾಗಿ ಟೀಂ ಇಂಡಿಯಾ 400 ರ ಗಡಿ ತಲುಪಲು ಸಾಧ‍್ಯವಾಯಿತು.

ಇಂಗ್ಲೆಂಡ್ ಪರ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಭಾರತೀಯರಿಗೆ ಎಂದಿನಂತೆ ಕಾಡಿದರು. ಮತ್ತೊಮ್ಮೆ ಐದು ವಿಕೆಟ್ ಗಳ ಗೊಂಚಲು ಪಡೆದರು. 100 ರನ್ ಗಳೊಳಗೇ 5 ವಿಕೆಟ್ ಕಳೆದುಕೊಂಡು 400 ಪ್ಲಸ್ ರನ್ ಪೇರಿಸಲು ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟಿಗರೇ ಕಾರಣರಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಕೊನೆಗೂ ಟಾಸ್ ಗೆದ್ದ ಟೀಂ ಇಂಡಿಯಾ, ಕೆಎಲ್ ರಾಹುಲ್ ಸೆಲೆಬ್ರೇಷನ್ ನೋಡಿ video

IND vs SA: ಟೀಂ ಇಂಡಿಯಾ ಇಂದು ಸರಣಿ ಗೆಲ್ಲಲು ಈ ಬದಲಾವಣೆ ಮಾಡಲೇಬೇಕು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ಮುಂದಿನ ಸುದ್ದಿ
Show comments