ಒನ್ ಮೋರ್ ಎಂದು ಉತ್ಸಾಹ ತುಂಬಿದ ಕೊಹ್ಲಿ: ಸಿಕ್ಸರ್ ಮೇಲೆ ಸಿಕ್ಸರ್ ಜಡಿದ ಶ್ರೇಯಸ್-ರಿಷಬ್ ಜೋಡಿ!

Webdunia
ಬುಧವಾರ, 18 ಡಿಸೆಂಬರ್ 2019 (17:18 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲಲು ಎದುರಾಳಿಗಳಿಗೆ ಟೀಂ ಇಂಡಿಯಾ 388 ರನ್ ಗಳ ಬೃಹತ್ ಗುರಿ ನಿಗದಿಪಡಿಸಿದೆ.


ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ರೋಹಿತ್ 159 ರನ್ ಗಳಿಗೆ ಔಟಾದರೆ ರಾಹುಲ್ 102 ರನ್ ಗಳಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರು.

ಆದರೆ ಬಳಿಕ ಒಂದಾದ ಯುವ  ಕ್ರಿಕೆಟಿಗರಾದ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ವಿಂಡೀಸ್ ಬೌಲಿಂಗ್ ನ್ನು ಹಿಗ್ಗಾ ಮುಗ್ಗಾ ಚಚ್ಚಿದರು. ಇವರಿಬ್ಬರು ಲೀಲಾಜಾಲವಾಗಿ ಸಿಕ್ಸರ್ ಜಡಿಯುತ್ತಿದ್ದರೆ ಮೈದಾನದಲ್ಲಿದ್ದವರ ಉತ್ಸಾಹ ಮುಗಿಲು ಮುಟ್ಟಿತ್ತು.

ಎಷ್ಟೆಂದರೆ ಡ್ರೆಸ್ಸಿಂಗ್ ರೂಂನಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇತರ ಕ್ರಿಕೆಟಿಗರೂ ಶ್ರೇಯಸ್ ಗೆ ಕೈ ಸನ್ನೆ ಮೂಲಕ ಒನ್ ಮೋರ್ ಸಿಕ್ಸರ್ ಎಂದು ನಗುತ್ತಲೇ ಸನ್ನೆ ಮಾಡಿ ಹುರಿದುಂಬಿಸುತ್ತಿದ್ದರು. ದುರದೃಷ್ಟವಶಾತ್ ಇದೇ ಭರದಲ್ಲಿ ರಿಷಬ್ 39 ರನ್ ಗಳಿಸಿ ಔಟಾದರು. ಅದಾದ ಬಳಿಕ ಶ್ರೇಯಸ್ ಕೂಡಾ 32 ಎಸೆತಗಳಲ್ಲಿ 4 ಸಿಕ್ಸರ್ ಗಳೊಂದಿಗೆ 53 ರನ್ ಸಿಡಿಸಿ ಔಟಾದರು. ಆದರೆ ಇವರಿಬ್ಬರ ಜೋಡಿ ಒಂದೇ ಓವರ್ ನಲ್ಲಿ 31 ರನ್ ಸೂರೆಗೊಂಡಿದ್ದು ವಿಶೇಷವಾಗಿತ್ತು.  ಇದರೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಶ್ರೇಯಸ್‌ ಅಯ್ಯರ್‌ ಪಡೆಗೆ ಮೊದಲ ಸರಣಿಯ ಜಯದ ಪುಳಕ

ZIM VS IND T20I: ಸತತ ಎರಡನೇ ಪಂದ್ಯದಲ್ಲೂ ಎಡವಿದ ಸ್ಟಾರ್ ಬ್ಯಾಟರ್‌, ಅಭಿಷೇಕ್ ಶರ್ಮಾ ಅವರನ್ನು ಕೈಬಿಡಲಾಗುವುದೇ

India vs Zimbabwe 2nd T20I: ಟಾಸ್‌ ಗೆದ್ದ ಜಿಂಬಾಬ್ವೆ, ಬೌಲಿಂಗ್ ಆಯ್ಕೆ

ಭಾರತ ಪುರುಷ, ಮಹಿಳಾ ಕ್ರಿಕೆಟ್‌ ತಂಡಗಳಿಗೆ ಖುಲಾಯಿಸಿದ ಅದೃಷ್ಟ: ಏಷ್ಯನ್‌ ಗೇಮ್ಸ್‌ನಲ್ಲಿ ನೇರ ಕ್ವಾರ್ಟರ್‌ಗೆ

ಗೌತಮ್ ಗಂಭೀರ್ ಇಲ್ಲದ್ದಕ್ಕೇ ಟೀಂ ಇಂಡಿಯಾ ಗೆದ್ದಿದ್ದು: ಫುಲ್ ಟ್ರೋಲ್

ಮುಂದಿನ ಸುದ್ದಿ
Show comments