Publish Date: Mon, 15 Jan 2018 (09:43 IST)
Updated Date: Mon, 15 Jan 2018 (09:45 IST)
ಸೆಂಚೂರಿಯನ್: ಟೆಸ್ಟ್ ಸರಣಿಗಾಗಿ ದ.ಆಫ್ರಿಕಾಗೆ ಬಂದಿಳಿದಿರುವ ಭಾರತ ತಂಡಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಇದಕ್ಕೆ ಕಾರಣ ಅಲ್ಲಿ ತಲೆದೋರಿರುವ ಜನಾಂಗೀಯ ದಂಗೆ ಬಿಕ್ಕಟ್ಟು.
ಆಫ್ರಿಕಾದಲ್ಲಿ ಜನಾಂಗೀಯ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಪ್ರತಿಭಟನಾಕಾರರು ಸಿಕ್ಕ ಸಿಕ್ಕ ಕಡೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡ ಉಳಿದುಕೊಂಡಿರುವ ಹೋಟೆಲ್ ಸಮೀಪದ ಮಾಲ್ ನಲ್ಲೂ ಲೂಟಿಕೋರರು ದಾಳಿ ನಡೆಸಿದ್ದಾರೆ.
ಹೀಗಾಗಿ ಕ್ರಿಕೆಟಿಗರ ಭದ್ರತೆ ಹೆಚ್ಚಿಸಲಾಗಿದೆ. ಜಾಹೀರಾತೊಂದರಲ್ಲಿ ಜನಾಂಗೀಯ ಬೇಧ ಮಾಡುವಂತಹ ಬರಹ ಬಂದಿದ್ದರಿಂದ ಈ ಬಿಕ್ಕಟ್ಟು ತಲೆದೋರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ