Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಟಿ20 ಸರಣಿ ಇಂದಿನಿಂದ

ಭಾರತ-ದ.ಆಫ್ರಿಕಾ ಟಿ20 ಸರಣಿ ಇಂದಿನಿಂದ
ತಿರುವನಂತಪುರಂ , ಬುಧವಾರ, 28 ಸೆಪ್ಟಂಬರ್ 2022 (08:10 IST)
ತಿರುವನಂತಪುರಂ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಇಂದು ತಿರುವನಂತಪುರಂನಲ್ಲಿ ಚಾಲನೆ ಸಿಗಲಿದೆ.

ಈಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದಿರುವ ರೋಹಿತ್ ಪಡೆ ಅದೇ ತಂಡದೊಂದಿಗೆ ಈಗ ದ.ಆಫ್ರಿಕಾ ವಿರುದ್ಧ ಆಡಲಿಳಿಯಲಿದೆ. ಆಸ್ಟ್ರೇಲಿಯಾದಂತೇ ಟೆಂಬಾ ಬವುಮಾ ನೇತೃತ್ವದ ಆಫ್ರಿಕಾ ಪಡೆಯೂ ಕಠಿಣ ಎದುರಾಳಿಯಾಗಿದೆ.

ಹೀಗಾಗಿ ರೋಹಿತ್ ಪಡೆ ಮತ್ತೆ ಸರ್ವಾಂಗೀಣ ಪ್ರದರ್ಶನ ನೀಡುವುದರತ್ತ ಗಮನ ಕೊಡಬೇಕು. ಆಸೀಸ್ ಸರಣಿ ಗೆದ್ದರೂ ಬೌಲಿಂಗ್ ಚಿಂತೆಯ ವಿಷಯವಾಗಿತ್ತು. ಪ್ರಮುಖ ಬೌಲರ್ ಗಳು ವಿಕೆಟ್ ಕೀಳಲು ವಿಫಲವಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ.ಹೀಗಾಗಿ ವಿಶ್ವಕಪ್ ಗೆ ಮುನ್ನ ನಡೆಯಲಿರುವ ಈ ಟಿ20 ಸರಣಿಯಲ್ಲಿ ಭಾರತ ತಂಡ ಬೌಲಿಂಗ್ ಸುಧಾರಿಸುವತ್ತ ಗಮನಹರಿಸಬೇಕಾಗಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಾಷೆಯಾಗಿಯೇ ಸ್ಪಾನ್ಸರ್ ಗಳಿಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ