Select Your Language

Notifications

webdunia
webdunia
webdunia
webdunia

ಎರಡೇ ದಿನಕ್ಕೆ ಬಾಲ ಮುದುರಿಕೊಂಡ ಅಫ್ಘಾನಿಸ್ತಾನ! ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಎರಡೇ ದಿನಕ್ಕೆ ಬಾಲ ಮುದುರಿಕೊಂಡ ಅಫ್ಘಾನಿಸ್ತಾನ! ಟೀಂ ಇಂಡಿಯಾಕ್ಕೆ ಭರ್ಜರಿ ಜಯ
ಬೆಂಗಳೂರು , ಶುಕ್ರವಾರ, 15 ಜೂನ್ 2018 (17:26 IST)
ಬೆಂಗಳೂರು: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರೆ ಇನ್ನೇನಾಗುತ್ತದೆ? ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ಪರಿಸ್ಥಿತಿಯೂ ಇದೇ ಆಗಿದೆ. ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲನುಭವಿಸಿದೆ.

ನಿನ್ನೆ ಪ್ರಾರಂಭವಾದ ಟೆಸ್ಟ್ ಪಂದ್ಯ ಇಂದು ಎರಡನೇ ದಿನಕ್ಕೆ ಸಮಾಪ್ತಿಯಾಗಿದೆ! ಇಂದು 474 ರನ್ ಗಳ ಗುರಿ ನೀಡಿದ್ದ ಟೀಂ ಇಂಡಿಯಾ ನಂತರ ಬೌಲಿಂಗ್ ನಲ್ಲೂ ಮಾರಕ ದಾಳಿ ಎಸಗಿತು.

ಮೊದಲು ಅಫ್ಘನ್ ರನ್ನು 109 ರನ್ ಗಳಿಗೆ ಮೊದಲ ಇನಿಂಗ್ಸ್ ನಲ್ಲಿ ಆಲೌಟ್ ಮಾಡಿದ ಟೀಂ ಇಂಡಿಯಾ ನಂತರ ಎರಡನೇ ದಿನದಂತ್ಯಕ್ಕೆ 4 ಓವರ್ ಗಳು ಬಾಕಿ ಇರುವಾಗ 103 ರನ್ ಗಳಿಗೆ ಆಲೌಟ್ ಮಾಡಿತು. ಇದರಿಂದಾಗಿ ಟೀಂ ಇಂಡಿಯಾ ಇನಿಂಗ್ಸ್ ಮತ್ತು 262 ರನ್ ಗಳಿಂದ ಗೆದ್ದುಕೊಂಡಿತು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್, ಉಮೇಶ್ ಯಾದವ್ 3 ಮತ್ತು ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಶಿಶುಗಳ ಎದುರು ಟೀಂ ಇಂಡಿಯಾ ಬೃಹತ್ ಮೊತ್ತ