Select Your Language

Notifications

webdunia
webdunia
webdunia
webdunia

ಶಿಖರ್ ಧವನ್ ಔಟಾದ ಬಳಿಕ ಸ್ತಬ್ಧವಾಯಿತು ಮೈದಾನ

ಶಿಖರ್ ಧವನ್ ಔಟಾದ ಬಳಿಕ ಸ್ತಬ್ಧವಾಯಿತು ಮೈದಾನ
ಬೆಂಗಳೂರು , ಗುರುವಾರ, 14 ಜೂನ್ 2018 (18:09 IST)
ಬೆಂಗಳೂರು: ಶಿಖರ್ ಧವನ್ ಕ್ರೀಸ್ ನಲ್ಲಿದ್ದಷ್ಟು ಸಮಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೋಡವಿಲ್ಲದೇ ಗುಡುಗು, ಮಿಂಚು ಎಲ್ಲಾ ಹರಿದಿತ್ತು. ಆದರೆ ಧವನ್ ಔಟಾಗುತ್ತಿದ್ದಂತೇ ಮೈದಾನ ತಣ್ಣಗಾಯಿತು.

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಮುಗಿದಾಗ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದೆ. ಆರಂಭಿಕರಾದ ಶಿಖರ್ ಧವನ್ 96 ಎಸೆತಗಳಲ್ಲಿ 19 ಬೌಂಡರಿ, 3 ಸಿಕ್ಸರ್ 107 ರನ್ ಗಳಿಸಿದರೆ ಮುರಳಿ ವಿಜಯ್ 153 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ನೆರವಿನಿಂದ 105 ರನ್ ಗಳಿಸಿದರು.

ಆರಂಭಿಕರಿಬ್ಬರೂ ಶತಕ ಗಳಿಸಿದರೆ ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಬದಲು ಕಣಕ್ಕಿಳಿದ ಸ್ಥಳೀಯ ಪ್ರತಿಭೆ ಕೆಎಲ್ ರಾಹುಲ್ ಅರ್ಧಶತಕ (54) ಗಳಿಸಿ ಔಟಾದರು. ಆದರೆ ನಾಯಕ ಅಜಿಂಕ್ಯಾ ರೆಹಾನೆ (10 ರನ್) ರಶೀದ್ ಖಾನ್ ಬೌಲಿಂಗ್ ನಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ಚೇತೇಶ್ವರ ಪೂಜಾರ ಕೂಡಾ 35 ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ ಕೂಡಾ ಹೆಚ್ಚೇನೂ ಕಮಾಲ್ ಮಾಡಲಿಲ್ಲ.

ದಿನದಂತ್ಯಕ್ಕೆ ರವಿಚಂದ್ರನ್ ಅಶ್ವಿನ್ 7 ರನ್ ಹಾಗೂ ಹಾರ್ದಿಕ್ ಪಾಂಡ್ಯ 10 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಫಾ ವರ್ಲ್ಡ್ ಕಪ್ ಗೆ ಇಂದಿನಿಂದ ಚಾಲನೆ