Publish Date: Thu, 14 Jun 2018 (18:05 IST)
Updated Date: Thu, 14 Jun 2018 (18:06 IST)
ನವದೆಹಲಿ: 2018 ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ ಇಂದಿನಿಂದ ರಷ್ಯಾದಲ್ಲಿ ಆರಂಭವಾಗಲಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಬಗ್ಗೆ ಭಾರತದಲ್ಲೂ ಕ್ರೇಜ್ ಇದೆ.
ಮೊದಲ ಪಂದ್ಯದಲ್ಲಿ ಅತಿಥೇಯ ರಷ್ಯಾ, ಸೌದಿ ಅರೇಬಿಯಾವನ್ನು ಎದುರಿಸಲಿದೆ. ಭಾರತದ ಕಾಲಮಾನ ಪ್ರಕಾರ ಈ ಪಂದ್ಯ ರಾತ್ರಿ 8.30 ಕ್ಕೆ ಆರಂಭವಾಗಲಿದೆ.
ಒಟ್ಟು 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಒಟ್ಟು 12 ಸ್ಥಳಗಳಲ್ಲಿ 64 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನಡೆಯುವ ಮಾಸ್ಕೋದ ಮೈದಾನದಲ್ಲಿ 81,000 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿದೆ.ಜುಲೈ 15 ರಂದು ಫೈನಲ್ ಪಂದ್ಯಗಳು ನಡೆಯಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.