Select Your Language

Notifications

webdunia
webdunia
webdunia
webdunia

ಅಂದು ಡೆಲ್ಲಿ ಹುಡುಗ ಸೆಹ್ವಾಗ್ ಕೈ ತಪ್ಪಿದ್ದು, ಇಂದು ಮತ್ತೊಬ್ಬ ಡೆಲ್ಲಿ ಹುಡುಗ ಶಿಖರ್ ಧವನ್ ಕೈ ಸೇರಿತು!

ವೀರೇಂದ್ರ ಸೆಹ್ವಾಗ್
ಬೆಂಗಳೂರು , ಶುಕ್ರವಾರ, 15 ಜೂನ್ 2018 (08:51 IST)
ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮಕ್ಕೂ ಮೊದಲೇ ಶತಕ ಬಾರಿಸಿ ಶಿಖರ್ ಧವನ್ ದಾಖಲೆ ನಿರ್ಮಿಸಿದರು.

ಈ ಮೂಲಕ ಭೋಜನ ವಿರಾಮದ ಮೊದಲು ಶತಕ ಭಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾದರು. ಆದರೆ ಇದಕ್ಕೂ ಮೊದಲೇ ವೀರೇಂದ್ರ ಸೆಹ್ವಾಗ್ ಈ ದಾಖಲೆ ಮಾಡಬೇಕಿತ್ತು. ಆದರೆ ಕೂದಲೆಳೆಯಲ್ಲಿ ಕೈ ಜಾರಿತ್ತು.

2006 ರಲ್ಲಿ ಸೈಂಟ್ ಲೂಸಿಯಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಹ್ವಾಗ್ ಇದೇ ರೀತಿ ಬ್ಯಾಟ್ ಬೀಸಿದ್ದರು. ಆದರೆ ಭೋಜನ ವಿರಾಮದ ವೇಳೆಗೆ ಅವರಿಗೆ 99 ರನ್ ಗಳಿಸಲಷ್ಟೇ ಶಕ್ಯವಾಯಿತು. ಇದರಿಂದಾಗಿ ಡೆಲ್ಲಿ ಮೂಲದ ಸೆಹ್ವಾಗ್ ಗೆ ದಾಖಲೆ ಸ್ವಲ್ಪದರಲ್ಲೇ ಕೈ ತಪ್ಪಿತು. ಆ ನಿರಾಶೆ ಇದೀಗ ಮತ್ತೊಬ್ಬ ಡೆಲ್ಲಿ ಮೂಲದ ಆಟಗಾರ ಶಿಖರ್ ಧವನ್ ಮೂಲಕ ಪೂರ್ಣಗೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡೆ ಎಂದ ಕ್ರಿಕೆಟಿಗ ಯಾರು ಗೊತ್ತಾ?