Publish Date: Wed, 29 Jan 2020 (09:05 IST)
Updated Date: Wed, 29 Jan 2020 (09:07 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಹ್ಯಾಮಿಲ್ಟನ್ ನ ಸೆಡನ್ ಪಾರ್ಕ್ ಮೈದಾನದಲ್ಲಿ ತೃತೀಯ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ಸರಣಿ ಗೆದ್ದ ಸಾಧನೆ ಮಾಡಲಿದೆ.
ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯ ಗೆದ್ದಿರುವ ಟೀಂ ಇಂಡಿಯಾಗೆ ಉಳಿದ ಮೂರು ಪಂದ್ಯಗಳ ಪೈಕಿ ಒಂದನ್ನು ಗೆದ್ದರೂ ಸರಣಿ ಕೈವಶ ಮಾಡಿಕೊಳ್ಳಬಹುದಾಗಿದೆ. ಆದರೆ ಪ್ರಸಕ್ತ ಟೀಂ ಇಂಡಿಯಾ ಆಟಗಾರರ ಫಾರ್ಮ್ ನೋಡಿದರೆ ಇಂದೇ ಆ ಸಾಧನೆಯಾದರೂ ಅಚ್ಚರಿಯಿಲ್ಲ.
ಭಾರತ ಇಂದೂ ಕೂಡಾ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ರೋಹಿತ್ ಶರ್ಮಾ ಕಳೆದೆರಡು ಪಂದ್ಯಗಳಲ್ಲಿ ಬೇಗನೇ ಔಟಾಗಿದ್ದು ಬಿಟ್ಟರೆ ಭಾರತಕ್ಕೆ ಇನ್ಯಾವುದೇ ಸಂಕಟವಿಲ್ಲ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.30 ಕ್ಕೆ ಪಂದ್ಯಾರಂಭವಾಗಲಿದೆ.