Publish Date: Tue, 28 Jan 2020 (15:43 IST)
Updated Date: Tue, 28 Jan 2020 (15:45 IST)
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕರ್ನಾಟಕ ಮತ್ತು ರೈಲ್ವೇಸ್ ನಡುವೆ ನಡೆಯುತ್ತಿರುವ ರಣಜಿ ಪಂದ್ಯದ ಎರಡನೇ ದಿನದಾಟ ತಡವಾಗಿ ಆರಂಭವಾಗಿದೆ.
ಒದ್ದೆ ಮೈದಾನದಿಂದಾಗಿ ಪಂದ್ಯ ತಡವಾಗಿ ಆರಂಭವಾಗಿದ್ದು, ಇಂದಿನ ದಿನದ ಬಹುತೇಕ ಸಮಯದ ಆಟ ವ್ಯರ್ಥವಾಗಿದೆ. ಇತ್ತೀಚೆಗಿನ ವರದಿ ಬಂದಾಗಿ ರೈಲ್ವೇಸ್ 6 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತ್ತು.
ನಿನ್ನೆಯ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು. ಒಂದು ರೀತಿಯಲ್ಲಿ ಮಳೆ ಕುಸಿತದ ಹಾದಿ ಹಿಡಿದಿದ್ದ ರೈಲ್ವೇಸ್ ಗೆ ಚೇತರಿಕೆ ನೀಡಿದಂತಾಗಿದೆ.