ಟೀಂ ಇಂಡಿಯಾ ಆಟಗಾರರಿಗೆ ಇನ್ಮುಂದೆ ಹೆಂಡ್ತಿ ಜೊತೆ ಇರುವ ಯೋಗವಿಲ್ಲ

Krishnaveni K
ಮಂಗಳವಾರ, 14 ಜನವರಿ 2025 (15:13 IST)
ಮುಂಬೈ: ಟೀಂ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನದಿಂದ ಬೇಸತ್ತ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಕ್ರಿಕೆಟಿಗರಿಗೆ ಹೆಂಡತಿಯರ ಜೊತೆ ಇರುವ ಯೋಗವೂ ಇರಲ್ಲ. ಇದೇನಿದು ಹೊಸ ರೂಲ್ಸ್ ಇಲ್ಲಿ ನೋಡಿ.

ಸಾಮನ್ಯವಾಗಿ ಕ್ರಿಕೆಟಿಗರು ವಿದೇಶ ಪ್ರವಾಸದ ವೇಳೆ ತಮ್ಮ ಪತ್ನಿ, ಮಕ್ಕಳನ್ನೂ ಕರೆದೊಯ್ಯುತ್ತಾರೆ. ಆದರೆ ಇನ್ನು ಮುಂದೆ ಪ್ರವಾಸದ ಪೂರ್ತಿ ಸಮಯ ಪತ್ನಿಯರಿಗೆ ಜೊತೆಗಿರಲು ಅವಕಾಶವಿರಲ್ಲ. ಬಿಸಿಸಿಐ ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ.

ಪತ್ನಿ, ಮಕ್ಕಳನ್ನು ಜೊತೆಗೆ ಕರೆದೊಯ್ಯುವ ಕ್ರಿಕೆಟಿಗರು ಕ್ರಿಕೆಟ್ ಅಭ್ಯಾಸಕ್ಕಿಂತ ಫ್ಯಾಮಿಲಿ ನೋಡಿಕೊಳ್ಳುವುದರಲ್ಲೇ ಬ್ಯುಸಿಯಾಗುತ್ತಾರೆ. ಹೀಗಾಗಿ ಕ್ರಿಕೆಟಿಗರು ಕೆಲವು ಸೀಮಿತ ಸಮಯ ಮಾತ್ರ ಪತ್ನಿಯರನ್ನು ಜೊತೆಗಿಟ್ಟುಕೊಳ್ಳಲು ಅವಕಾಶ ದೊರೆಯಲಿದೆ.

ಇಷ್ಟೇ ಅಲ್ಲ, ಆಟಗಾರರ ವೇತನ ಕಡಿತಕ್ಕೂ ಬಿಸಿಸಿಐ ಚಿಂತನೆ ನಡೆಸಿದೆ. ಟೀಂ ಇಂಡಿಯಾ ಆಟಗಾರರಿಗೆ ಗುತ್ತಿಗೆ ಆಧಾರದಲ್ಲಿ ವೇತನ ನಿಗದಿಯಾಗಿದೆ. ಅದರಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಎ ಪ್ಲಸ್ ದರ್ಜೆಯ ಆಟಗಾರರಾಗಿದ್ದು ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ಆದರೆ ಇನ್ನು ಮುಂದೆ ಆಟಗಾರನ ಪ್ರದರ್ಶನ ಆಧರಿಸಿ ಸಂಭಾವನೆ ನಿಗದಿಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಕಳಪೆ ಫಾರ್ಮ್ ಪ್ರದರ್ಶಿಸಿದ ಆಟಗಾರ ಎಂತಹದ್ದೇ ಸ್ಟಾರ್ ಆಟಗಾರನಾಗಿದ್ದರೂ ಕಡಿಮೆ ಸಂಭಾವನೆ ಸಿಗಲಿದೆ. ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರನಾದರೂ ಭಾರೀ ಸಂಭಾವನೆ ಸಿಗಲಿದೆ. ಇದರಿಂದ ಆಟಗಾರರು ಉತ್ತಮ ಪ್ರದರ್ಶನ ನೀಡಲು ಉತ್ತೇಜಿಸಿದಂತಾಗುತ್ತದೆ ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್ Video

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ಮುಂದಿನ ಸುದ್ದಿ
Show comments